×
Ad

ಯಾರೋ ಬರುತ್ತಿದ್ದಾರೆ, ನಾನು ಮತ್ತೆ ಕರೆ ಮಾಡುತ್ತೇನೆ: ಇದು ಪುಣೆಯಲ್ಲಿ ಕೊಲೆಯಾದ ಇನ್ಫೋಟೆಕ್ಕಿ ರಸೀಲಾರ ಕೊನೆಯ ಮಾತು

Update: 2017-02-07 16:47 IST

ಪುಣೆ,ಫೆ.7:" ಯಾರೋ ಬರುತ್ತಿದ್ದಾರೆ ನಾನು ಮತ್ತೆ ಫೋನ್ ಮಾಡುತ್ತೇನೆ” ಎಂದು ಪುಣೆ ಇನ್ಫೊಸಿಸ್‌ನಲ್ಲಿ ಕೊಲೆಯಾದ ಕಲ್ಲಿಕೋಟೆಯ ರಸೀಲಾ ರಾಜು(24) ತನ್ನ ಸಂಬಂಧಿಕಳಾದ ಅಂಜಲಿ ನಂದಕುಮಾರ್‌ರೊಂದಿಗೆ ಕೊನೆಯ ಮಾತುಕತೆ ನಡೆಸಿದ್ದರು ಎಂದು ವರದಿಯೊಂದುತಿಳಿಸಿದೆ. ಫೋನ್‌ನಲ್ಲಿಮಾತಾಡುವುದನ್ನು ಕಟ್ ಮಾಡಿದ ರಸೀಲಾ ಮುಂದಿನ ಕ್ಷಣಗಳಲ್ಲಿ ಕೊಲೆಯಾಗಿದ್ದರು.

ರವಿವಾರದ ಒಬ್ಬಳೇ ಕುಳಿತುಕೆಲಸ ಮಾಡಲು ತನಗೆ ಇಷ್ಟವಿಲ್ಲ ಎಂದು ರಸೀಲಾ ಫೋನ್‌ನಲ್ಲಿ ತಿಳಿಸಿದ್ದರು. ತನ್ನ ಬೋಸ್ ಹೀಗೆ ಕೆಲಸ ಮಾಡಲು ಒತ್ತಾಯಿಸುತ್ತಿದ್ದಾರೆ. ಆದರೆ ಈಗ ಮಾಡುವ ಕೆಲಸ ಮುಗಿಸಿದರೆ ತನಗೆ ಫೆಬ್ರವರಿಯಲ್ಲಿ ಬೆಂಗಳೂರಿಗೆ ವರ್ಗಾವಣೆ ಸಿಗುತ್ತದೆ ಎಂದು ರಸೀಲಾ ಭಾವಿಸಿದ್ದರು.

ಮಾತು ಕೊನೆಗೊಳಿಸುವುದರೊಂದಿಗೆ ರಸೀಲಾರಿದ್ದ ಕೋಣೆಗೆ ಬಂದವನೇ ಕೊಲೆ ನಡೆಸಿದ್ದಾನೆ. ಆತನೊಂದಿಗೆ ರಸೀಲಾ ಹೋರಾಡಿದ್ದಾರೆ. ರಸೀಲಾರ ಮುಖ ಮತ್ತು ಎದೆಯಲ್ಲಿ ಹೊಡೆದಿರುವ ಗಾಯಗಳಿದ್ದವು. ನಂತರವೇ ಆತ ಕಂಪ್ಯೂಟರ್ ವಯರ್‌ನ್ನು ಕೊರಳಿಗೆ ಬಿಗಿದು ಕೊಲೆ ಮಾಡಿದ್ದ.

ಕೊಲೆಯಾದ ಮರುದಿನ ಕೊಲೆಗಾರನೆಂದು ಶಂಕಿಸಲಾದ ಇನ್ಫೊಸಿಸ್ ಸೆಕ್ಯುರಿಟಿ ಗಾರ್ಡ್ ಸೈಕಿಯಾ ಬಾಬೆನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News