×
Ad

ನಮ್ಮನ್ನು ಪ್ರೀತಿಸುವ ಜನರಿಗೆ ಅಮೆರಿಕಕ್ಕೆ ಸ್ವಾಗತ: ಟ್ರಂಪ್

Update: 2017-02-07 21:16 IST

ಮ್ಯಾಕ್‌ಡಿಲ್ ಏರ್‌ಫೋರ್ಸ್ ಬೇಸ್ (ಅಮೆರಿಕ), ಫೆ. 7: ನಿರಾಶ್ರಿತರು ಮತ್ತು ಮುಸ್ಲಿಮ್ ದೇಶಗಳ ಪ್ರಯಾಣಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘‘ನಮ್ಮ ದೇಶವನ್ನು ಪ್ರೀತಿಸುವ ಜನರ’’ ಅಮೆರಿಕ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದಾಗಿ ಘೋಷಿಸಿದ್ದಾರೆ.

ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಇಲ್ಲಿರುವ ಪ್ರಧಾನ ಕಚೇರಿಗೆ ಸೋಮವಾರ ಭೇಟಿ ನೀಡಿದ ವೇಳೆ ಅವರು ಈ ಮಾತುಗಳನ್ನು ಹೇಳಿದ್ದಾರೆ.ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾಟೊಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದರು.

‘‘ನಮ್ಮ ದೇಶವನ್ನು ಗಾಢವಾಗಿ ಕೊನೆಯವರೆಗೂ ಪ್ರೀತಿಸುವ ಜನರನ್ನು ಸ್ವಾಗತಿಸುವ ಹಾಗೂ ನಮ್ಮನ್ನು ಮತ್ತು ನಮ್ಮ ದೇಶವನ್ನು ನಾಶಪಡಿಸಲು ಬಯಸುವವರನ್ನು ಹೊರಗಿಡುವ ಬಲವಾದ ಕಾರ್ಯಕ್ರಮವೊಂದು ನಮಗೆ ಬೇಕಾಗಿದೆ’’ ಎಂದು ಟ್ರಂಪ್ ಹೇಳಿದರು.

‘‘ಸ್ವಾತಂತ್ರ, ಭದ್ರತೆ ಮತ್ತು ನ್ಯಾಯ ನೆಲೆಗೊಳ್ಳುತ್ತದೆ’’ ಎಂದರು. ‘‘ನಾವು ಭಯೋತ್ಪಾದನೆಯನ್ನು ಸೋಲಿಸುತ್ತೇವೆ ಮತ್ತು ಅದು ನಮ್ಮ ದೇಶದಲ್ಲಿ ಬೇರು ಬಿಡಲು ಅವಕಾಶ ನೀಡುವುದಿಲ್ಲ’’ ಎಂದರು.

‘‘ನಾವು ನ್ಯಾಟೊವನ್ನು ಬಲವಾಗಿ ಬೆಂಬಲಿಸುತ್ತೇವೆ’’ ಎಂದು ಘೋಷಿಸಿದರು.ನ್ಯಾಟೊ ಮತ್ತು ಇತರ ಮೈತ್ರಿಕೂಟಗಳ ವಿರುದ್ಧವಾಗಿ ಟ್ರಂಪ ಈ ಹಿಂದೆ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News