×
Ad

ಮಾಜಿ ಕಾರ್ಯದರ್ಶಿ, ಇತರರಿಗೆ ಜಾಮೀನು

Update: 2017-02-07 23:54 IST

ಹೊಸದಿಲ್ಲಿ, ಫೆ.7: ಎಸ್‌ಕೆಎಸ್ ಇಸ್ಪಾತ್ ಆ್ಯಂಡ್ ಪವರ್ ಲಿ.ಕಂಪೆನಿಗೆ ಛತ್ತೀಸ್‌ಗಡದಲ್ಲಿ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ನಡೆದಿದ್ದ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತಾ ಅವರಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಈಗಾಗಲೇ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಏಳಕ್ಕೂ ಅಧಿಕ ಪ್ರಕರಣಗಳಲ್ಲಿ ಕಾನೂನು ಕ್ರಮವನ್ನು ಎದುರಿಸುತ್ತಿರುವ ಗುಪ್ತಾ ಜೊತೆಗೆ ಸಹಆರೋಪಿಗಳಾಗಿರುವ ಹಿರಿಯ ಸರಕಾರಿ ಅಧಿಕಾರಿ ಕೆ.ಎಸ್.ಕ್ರೋಫಾ, ಎಸ್‌ಕೆಎಸ್ ಕಂಪೆನಿಯ ಇಬ್ಬರು ನಿರ್ದೇಶಕರಾದ ಅನಿಲ್ ಗುಪ್ತಾ ಮತ್ತು ದೀಪಕ್ ಗುಪ್ತಾ ಹಾಗೂ ಇತರ ಮೂವರಿಗೂ ಜಾಮೀನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News