ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಆಗ್ರಹ

Update: 2017-02-07 18:33 GMT

ಮಣಿಪಾಲ, ಫೆ.7: ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಜನತೆಗೆ ತೀವ್ರ ಸಮಸ್ಯೆ ಉಂಟು ಮಾಡಿರುವ ಮರಳು ಅಲಭ್ಯತೆ ಇಂದು ನಡೆದ ಉಡುಪಿ ಜಿಪಂನ 5ನೆ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಈ ಸಮಸ್ಯೆಗೆ ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸದಸ್ಯರು ಆಗ್ರಹಿಸಿದರು.

ದಿನಕರ ಬಾಬು ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯ ಆರಂಭದಲ್ಲೇ ಸರಕಾರಿ ಆದೇಶ-ಸುತ್ತೋಲೆಗಳ ಓದುವ ಸಂದರ್ಭ ಸರಕಾರಿ ಹಾಗೂ ಕಡಿಮೆ ವರಮಾನದ ವಸತಿ ಯೋಜನೆಗಳ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕುರಿತಂತೆ ಸರಕಾರ ಹೊರಡಿಸಿದ ಸುತ್ತೋಲೆ, ಜಿಲ್ಲೆಯಲ್ಲಿ ಮರಳುಗಾರಿಕೆ ಮೇಲೆ ನ್ಯಾಯಾಲಯ ವಿಸಿರುವ ತಡೆಯಾಜ್ಞೆಯಿಂದ ಉದ್ಭವಿಸಿರುವ ಸಮಸ್ಯೆಗಳ ಕುರಿತ ಚರ್ಚೆಗೆ ನಾಂದಿ ಹಾಡಿತು.

ಸಿಆರ್‌ಝೆಡ್ ವ್ಯಾಪ್ತಿಯ ಪ್ರದೇಶಗಳಲ್ಲಿ ಮರಳುಗಾರಿಕೆಗೆ ನ್ಯಾಯಾಲಯದ ನಿರ್ಬಂಧವಿದ್ದು, ನಾನ್ ಸಿಆರ್‌ಝೆಡ್ ಪ್ರದೇಶದಲ್ಲಿ ಕೇವಲ 4 ಬ್ಲಾಕ್‌ಗಳಲ್ಲಿ ಮರಳುಗಾರಿಕೆಗೆ ಅವಕಾಶವಿದ್ದರೂ, ಜಿಲ್ಲೆಯ ಅನೇಕ ಕಡೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಮರಳನ್ನು ರಾತ್ರಿ ಅಕ್ರಮವಾಗಿ ಹೊರಜಿಲ್ಲೆಗೆ ಸಾಗಿಸಲಾಗುತ್ತಿದ್ದು, ಇವೆಲ್ಲವೂ ಗಣಿ ಹಾಗೂ ಭೂವಿಜ್ಞಾನ ಇಲಾಖೆ, ಕಂದಾಯ, ಪಿಡಬ್ಲುಡಿ ಹಾಗೂ ಪೊಲೀಸ್ ಇಲಾಖೆಗಳ ಮೂಗಿನಡಿಯಲ್ಲೇ ನಡೆಯುತ್ತಿದೆ ಎಂದು ಸದಸ್ಯರು ಆರೋಪಿಸಿದರು.

ಮಂಗಳೂರಿನಲ್ಲಿ ಇಲ್ಲದ ಮರಳುಗಾರಿಕೆ ನಿಷೇಧ, ನಿರ್ಬಂಧ ಉಡುಪಿ ಜಿಲ್ಲೆಗೆ ಮಾತ್ರ ಏಕೆ? ಅಲ್ಲಿ ಸರಾಗವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಅಲ್ಲಿಂದ ಮರಳನ್ನು ಇಲ್ಲಿಗೆ ತರಿಸಿಕೊಳ್ಳುವ ಅನಿವಾರ್ಯತೆ ಜಿಲ್ಲೆಗೆ ಬಂದಿದೆ ಎಂದು ವಿಷಯವನ್ನೆತ್ತಿದ ಪ್ರತಾಪ್ ಹೆಗ್ಡೆ ಮಾರಾಳಿ, ಜನಾರ್ದನ ತೋನ್ಸೆ, ಉದಯ ಕೋಟ್ಯಾನ್, ಬಾಬು ಶೆಟ್ಟಿ ಮುಂತಾದವರು ಪ್ರಶ್ನಿಸಿದರು. ಬಿಜೆಪಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿ, ಜಿಲ್ಲೆಯ ಮರುಳುಗಾರಿಕೆ ಸಮಸ್ಯೆಗೆ ಜಿಲ್ಲಾಡಳಿತದ ವೈಲ್ಯವೇ ಕಾರಣ. ಜಿಲ್ಲಾಡಳಿತ ಕಾನೂನುಬದ್ಧವಾಗಿ ಮರಳು ತೆಗೆಯಲು ಬಿಡುತ್ತಿಲ್ಲ. ಈಗ ಕೆಲವರಿಗೆ ಮಾತ್ರ ಮರಳುಗಾರಿಕೆಗೆ ಅವಕಾಶ ಸಿಗುತ್ತಿದೆ. ಎಲ್ಲರಿಗೂ ಮರಳು ತೆಗೆಯಲು ಮುಕ್ತ ಅವಕಾಶ ಕೊಡಿ ಎಂದು ಹೇಳಿದರು.

ಗಣಿ ಇಲಾಖೆಯ ಅಕಾರಿಗಳು ಉತ್ತರಿಸಿ ನಾನ್ ಸಿಆರ್‌ಝೆಡ್ ವ್ಯಾಪ್ತಿಯ 16 ಬ್ಲಾಕ್‌ಗಳಲ್ಲಿ ನಾಲ್ಕರಲ್ಲಿ ಮಾತ್ರ ಈಗ ಮರಳು ತೆಗೆಯಲು ಅವಕಾಶವಿದೆ. ಇದು ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿದೆ. ಅವರು ಇದರಲ್ಲಿ ಎರಡು ಬ್ಲಾಕ್‌ಗಳ ಮರಳನ್ನು ಸರಕಾರಿ ಯೋಜನೆಗಳ ನಿರ್ಮಾಣಕ್ಕೆ ಬಳಸುತ್ತಿದೆ. ಉಳಿದ ಕಡೆಗಳ ಮರಳುಗಳನ್ನು ತೆಗೆಯುವ ಬಗ್ಗೆ ಜಿಲ್ಲಾ ಮೇಲ್ವಿಚಾರಣಾ ಸಮಿತಿ ನಿರ್ಧರಿಸಲಿದ್ದು, ಇದಕ್ಕಾಗಿ ಎನ್‌ಐಟಿಕೆ ತಜ್ಞರ ಸಮಿತಿಯ ವರದಿಯನ್ನು ಕೇಳಲಾಗಿದೆ. ವರದಿಯಾಧಾರದಲ್ಲಿ ಶೀಘ್ರವೇ ಮರಳುಗಾರಿಕೆ ಆರಂಭಗೊಳ್ಳಲಿದೆ ಎಂದರು.

ಉಪವಿಭಾಗಾಕಾರಿ ಉತ್ತರ: ಕುಂದಾಪುರ ಉಪವಿಭಾಗಾಕಾರಿ ಶಿಲ್ಪಾ ನಾಗ್ ಸಭೆಗೆ ಬಂದ ನಂತರ ಈ ಕುರಿತು ಮತ್ತೆ ಚರ್ಚೆ ನಡೆಯಿತು.

 ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಶಿಲ್ಪಾ ನಾಗ್, ನಾನ್ ಸಿಆರ್‌ಝೆಡ್‌ನಲ್ಲಿ 16+2 ಒಟ್ಟು 18 ಬ್ಲಾಕ್‌ಗಳಿದ್ದು, ಇವುಗಳಲ್ಲಿ ಸದ್ಯಕ್ಕೆ 4ರಲ್ಲಿ ಮಾತ್ರ ಮರಳುಗಾರಿಕೆ ನಡೆಯುತ್ತಿದೆ. ಉಳಿದ ಬ್ಲಾಕ್‌ಗಳ ಕುರಿತು ಎನ್‌ಐಟಿಕೆ ತಜ್ಞರ ಸಮಿತಿ ನೀಡಿದ ವರದಿಯ ಆಧಾರದಲ್ಲಿ ಮರಳುಗಾರಿಕೆಗೆ ಟೆಂಡರ್ ಮೂಲಕ ಅನುಮತಿ ನೀಡಲಾಗುವುದು ಎಂದರು.

ಈ ನಡುವೆ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿ ವಶಪಡಿಸಿಕೊಂಡ ಒಟ್ಟು 600 ಘನ ಮೀ. ಮರಳು ದಾಸ್ತಾನಿನಿಂದ 35 ಲಕ್ಷ ರೂ. ಆದಾಯ ಬಂದಿದೆ. ಈ ಮರಳನ್ನು ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ವಾರಾಹಿ, ನಗರಸಭೆ-ಪುರಸಭೆಗಳಿಗೆ ಹಂಚಲಾಗಿದೆ. ಅಕ್ರಮವಾಗಿ ಮರಳನ್ನು ಹೊರಜಿಲ್ಲೆಗೆ ಸಾಗಿಸದಂತೆ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಲ್ಲಿ ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಮಧ್ಯಪ್ರವೇಶಿಸಿದ ಮಾತನಾಡಿದ ಶಿರೂರಿನ ಸದಸ್ಯ ಸುರೇಶ್ ಬಟ್ವಾಡಿ, ಶಿರೂರಿನಿಂದ ಪ್ರತಿದಿನ ರಾತ್ರಿ 12 ಗಂಟೆಯ ಬಳಿಕ 50 ಲಾರಿ ಮರಳು ಉತ್ತರ ಕನ್ನಡದತ್ತ ಸಾಗುತ್ತವೆ. ಇದು ಕಂದಾಯ ಮತ್ತು ಪೊಲೀಸ್ ಇಲಾಖೆಗಳ ನೇರ ಸುಪರ್ದಿಯಲ್ಲೇ ನಡೆಯುತ್ತಿದೆ ಎಂದು ಆರೋಪಿಸಿದರು. ಗ್ರಾಮಸ್ಥರು ತಡೆಯಲು ಹೋದರೆ ನಮ್ಮ ವಿರುದ್ಧವೇ ಹೆದ್ದಾರಿ ದರೋಡೆ ಪ್ರಕರಣವನ್ನು ಪೊಲೀಸರು ದಾಖಲಿಸುತ್ತಾರೆ ಎಂದು ಆರೋಪಿಸಿದರು.

ರಾಘವೇಂದ್ರ ಕಾಂಚನ್ ಮಾತನಾಡಿ, ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಬಂದರಿನಲ್ಲಿ ಪತ್ತೆಯಾದ ಕೋಟ್ಯಂತರ ರೂ. ವೌಲ್ಯದ 5000 ಮೆಟ್ರಿಕ್ ಟನ್ ಮರಳಿನ ಅಕ್ರಮ ದಾಸ್ತಾನನ್ನು ಊರಿನವರು ಹಿಡಿದುಕೊಟ್ಟರೂ ಗಣಿ ಇಲಾಖೆಯ ಅಕಾರಿಗಳು ದುರ್ಬಲ ಎ್ಐಆರ್ ದಾಖಲಿಸಿ ಅವರಿಗೆ ನೆರವಾಗುತ್ತಿದ್ದಾರೆ. ಗಣಿಗಾರಿಕೆಗೆ ಬಳಸಿದ ಯಾವುದೇ ಉಪಕರಣಗಳನ್ನು ವಶಪಡಿಸಿಕೊಂಡಿಲ್ಲ ಎಂದು ದೂರಿದರು.

ಈ ಬಗ್ಗೆ ಜಿಲ್ಲಾಕಾರಿಯವರು ತನಿಖೆಗೆ ಆದೇಶಿಸಿದ್ದು, ಅದರ ವರದಿ ಎದುರು ನೋಡ ಲಾಗುತ್ತಿದೆ ಎಂದ ಎಸಿ, ಜಿಲ್ಲೆಯ ಮರಳು ಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಬೇಕಿದೆ ಎಂದು ಚರ್ಚೆಗೆ ಮುಕ್ತಾಯ ಹಾಡಿದರು.

 ಹಾವಂಜೆ ಮೀಸಲು ಅರಣ್ಯದಿಂದ ಜನರಿಗಾಗುತ್ತಿರುವ ತೊಂದರೆಗಳ ಕುರಿತು ಜನಾರ್ದನ ತೋನ್ಸೆ, ಅಂಡಾರಿನ ಶಾಲೆಯೊಂದರ ಬಾವಿ ಕುಸಿದಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು ಜ್ಯೋತಿ ಹರೀಶ್ ಸಭೆಯ ಗಮನ ಸೆಳೆದರು.

ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಿಇಒ ಪ್ರಿಯಾಂಕಾ ಮೇರಿ ್ರಾನ್ಸಿಸ್, ಸ್ಥಾಯಿ ಸಮಿತಿಯ ಸದಸ್ಯರಾದ ಬಾಬು ಶೆಟ್ಟಿ, ಉದಯ ಕೋಟ್ಯಾನ್, ಶಶಿಕಾಂತ ಪಡುಬಿದ್ರೆ, ಗೀತಾಂಜಲಿ ಸುವರ್ಣ, ಉಪ ಕಾರ್ಯದಶಿ ಎನ್.ರಾಯ್ಕರ್, ಮುಖ್ಯ ಯೋಜನಾಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಟೋಲ್‌ಗೆ ವಿರೋಧ

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಅಳವಡಿಸಿರುವ ಟೋಲ್‌ಗೇಟ್‌ಗಳಲ್ಲಿ ಕಂಪೆನಿ ಟೋಲ್ ಸಂಗ್ರಹಿಸುವ ಕುರಿತು ಸಹ ಸದಸ್ಯರು ಸಭೆಯಲ್ಲಿ ಚರ್ಚಿಸಿದರು. ಟೋಲ್ ಸಂಗ್ರಹಕ್ಕೆ ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಪರಿಸರದ 8 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಟೋಲ್‌ನಿಂದ ರಿಯಾಯಿತಿ ನೀಡಬೇಕು ಎಂದು ಸಭೆಯಲ್ಲಿ ರಾಘವೇಂದ್ರ ಕಾಂಚನ್ ಆಗ್ರಹಿಸಿದರು.

ರಾ.ಹೆ. ಭೂಸ್ವಾೀನತಾ ಪ್ರಕ್ರಿಯೆ ಮುಗಿದಿದೆ. ಪಡುಬಿದ್ರೆಯಲ್ಲಿ ಶೇ.100 ಮಂದಿಗೆ ನೋಟಿಸ್ ನೀಡಲಾಗಿದ್ದು, ಇಲ್ಲಿನ್ನು ಯಾವುದೇ ಸಮಸ್ಯೆಗಳಿಲ್ಲ ಎಂದು ಶಿಲ್ಪ ನಾಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News