ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಮೀಸಲಿಡುವಂತೆ ಆಗ್ರಹ

Update: 2017-02-07 18:40 GMT

ಮೂಡುಬಿದಿರೆ, ಫೆ.7: ಕಲ್ಲಮುಂಡ್ಕೂರು ಗ್ರಾಮದಲ್ಲಿ ಕಂದಾಯ ಇಲಾಖೆಯವರು ನಿವೇಶನ ಮತ್ತು ಘನತ್ಯಾಜ್ಯ ವಿಲೇವಾರಿಗೆ ಜಾಗ ಮೀಸಲಿಡುವಂತೆ ಗ್ರಾಮಸ್ಥರು ಆಗ್ರಹಿಸಿದ ಘಟನೆ ಕಲ್ಲಮುಂಡ್ಕೂರಿನಲ್ಲಿ ನಡೆದಿದೆ. ಪಂ. ಅಧ್ಯಕ್ಷೆ ಪ್ರೇಮಾ ಅವರ ಅಧ್ಯಕ್ಷತೆಯಲ್ಲಿ ಕುದ್ರಿಪದವು ಹಾಲು ಉತ್ಪಾದಕರ ಸೊಸೈಟಿ ಬಳಿಯ ಗೋಳಿ ಮರದಡಿಯಲ್ಲಿ ನಡೆದ ಕಲ್ಲಮುಂಡ್ಕೂರು ಗ್ರಾಪಂ ವ್ಯಾಪ್ತಿಯ ಕಲ್ಲಮುಂಡ್ಕೂರು ಮತ್ತು ನಿಡ್ಡೋಡಿ ಗ್ರಾಮಗಳ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ರಾಜ್ಯ ಸರಕಾರದ 94ಸಿ, 94ಸಿಸಿಯಡಿ 2012ರ ಮುಂಚಿತ ವಾಗಿ ಮನೆಕಟ್ಟಿ ವಾಸ ಹೊಂದಿರುವವರು ಅರ್ಜಿ ಸಲ್ಲಿಸುವಂತೆ ಸ್ಥಳೀಯ ಗ್ರಾಮಕರಣಿಕರು ತಿಳಿಸಿದರು. ಉದ್ಯೋಗ ಖಾತ್ರಿಯ ಯೋಜನೆಯಂತೆ ಕೃಷಿ ಅಭಿವೃದ್ಧಿ, ಅನನಾಸು ತೋಟ ಮಾಡುವವರಿಗೆ ಸರಕಾರದ ಅನುದಾನಗಳ ಲಭ್ಯತೆ ಬಗ್ಗೆ ತೋಟಗಾರಿಕಾ ಅಕಾರಿ ಮಾಹಿತಿ ನೀಡಿದರು.

ಮೂಡುಬಿದಿರೆ ಪೊಲೀಸ್‌ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಸುಧಾಕರ ರಾವ್ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಣಾಕಾರಿ ಕಚೇರಿಯ ಶಿವಾನಂದ ಕಾಯ್ಕಿಣಿ ನೋಡೆಲ್ ಅಕಾರಿಯಾಗಿದ್ದರು. ಪಿಡಿಒ ಬಿ. ಉಗ್ಗಪ್ಪಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ತಾಪಂ ಸದಸ್ಯ ಸುಕುಮಾರ ಸನಿಲ್, ಇಲಾಖಾಕಾರಿಗಳು, ಪಂ.ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News