ಕುಟುಂಬದ ಮೇಲೆ ಮಾರಕ ಹಲ್ಲೆ: ಆರೋಪ

Update: 2017-02-07 18:43 GMT

ಮಂಗಳೂರು, ಫೆ.7: ಜಾಗದ ವಿವಾದಕ್ಕೆ ಸಂಬಂ ಸಿದಂತೆ ಕುಟುಂಬವೊಂದರ ಮೇಲೆ ತಂಡವೊಂದು ಮಾರಕಾಯುಧದಿಂದ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಬೆಂಗರೆಯಲ್ಲಿ ನಡೆದಿದೆ.

ಮೂಲತ: ಸುಳ್ಯ ಜಾಲ್ಸೂರಿನ ಪ್ರಸ್ತುತ ಬೆಂಗರೆಯಲ್ಲಿ ವಾಸವಾಗಿರುವ ಮಹ್ಮೂದ್ ಮತ್ತು ಅವರ ಪತ್ನಿ ಮೀನಾ, ಪುತ್ರ ಸಲ್ಮಾನ್ ಾರಿಸ್, ಪುತ್ರಿ ಶಮ್ಲಾನಾ ಹಲ್ಲೆಗೊಳಗಾದವರು. ಇವರಿಗೆ ಮೀನಾರ ಅಕ್ಕ ಮುಮ್ತಾಝ್, ಆಕೆಯ ಪತಿ ಅನ್ವರ್ ಹುಸೈನ್, ಪುತ್ರಿ ಶಮೀಮಾ, ಪುತ್ರ ಶಮೀರ್ ಹಾಗೂ ಅನ್ವರ್ ಹುಸೈನ್‌ರ ಪರಿಚ ಯದ ಕಣ್ಣೂರಿನ ಹಂಝ ಎಂಬವರು ಹಲ್ಲೆ ನಡೆಸಿ ದ್ದಾರೆ ಎಂದು ಆರೋಪಿಸಲಾಗಿದೆ. ಮೀನಾ ನೀಡಿದ ದೂರಿನಂತೆ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಹಲ್ಲೆಗೊಳಗಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡುತ್ತಿದ್ದ ಪೊಲೀ ಸರು ಯಾರದೋ ಸೂಚನೆ ಮೇರೆಗೆ ದಾರಿಮಧ್ಯೆ ಗಾಯಾಳು ಗಳನ್ನು ಇಳಿಸಿದ ಆರೋಪ ಕೇಳಿ ಬಂದಿದೆ. ಇದರಿಂದ ಸುಮಾರು ಅರ್ಧ ಗಂಟೆ ರಸ್ತೆ ತಡೆಯುಂಟಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು ಮೀನಾರ ಆರೋಪವನ್ನು ಅಲ್ಲಗ ಳೆದಿದ್ದಾರೆ. ನಾವು ಗಾಯಾಳುಗಳನ್ನು ದಾರಿಮಧ್ಯೆ ಇಳಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಲಿ: ಗಾಯಾಳು ಗಳನ್ನು ಸಾಗಾಟ ಮಾಡುತ್ತಿದ್ದ ಎಎಸ್ಸೆಗೆ ಹಿರಿಯ ಅಕಾರಿಯೊಬ್ಬರು ಒತ್ತಡ ಹಾಕಿ ಕೂಳೂರು ಸೇತುವೆ ಬಳಿ ಪೊಲೀಸರೇ ಇಲಾಖೆಯ ವಾಹನದಿಂದ ಇಳಿಸಿ ರುವುದು ಗಂಭೀರ ವಿಷಯವಾಗಿದೆ. ಈ ಬಗ್ಗೆ ಹಿರಿಯ ಅಕಾರಿಗಳು ತನಿಖೆ ನಡೆಸಬೇಕಾಗಿದೆ ಎಂದು ಡಿವೈಎ್ಐ ಮುಖಂಡ ಬಿ.ಕೆ.ಇಮ್ತಿಯಾಝ್ ಒತ್ತಾ ಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News