ಪುಟಿನ್ ಯಾರೆಂದು ಗೊತ್ತಿಲ್ಲ: ಟ್ರಂಪ್!
Update: 2017-02-08 20:54 IST
ವಾಶಿಂಗ್ಟನ್, ಫೆ. 8: ರಶ್ಯದೊಂದಿಗೆ ಆತ್ಮೀಯತೆ ಹೊಂದಿರುವುದಕ್ಕಾಗಿ ಟೀಕೆಗಳನ್ನು ಎದುರಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯಾರು ಎಂದು ತನಗೆ ಗೊತ್ತಿಲ್ಲ ಹಾಗೂ ರಶ್ಯದೊಂದಿಗೆ ತಾನು ಯಾವುದೇ ವ್ಯವಹಾರವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
''ಪುಟಿನ್ ಯಾರೆಂದುದ ನನಗೆ ಗೊತ್ತಿಲ್ಲ ಹಾಗೂ ರಶ್ಯದೊಂದಿಗೆ ನಾನು ವ್ಯವಹಾರ ಹೊಂದಿಲ್ಲ. ಆದರೆ, ದ್ವೇಷಿಸುವವರು ಹುಚ್ಚರಂತೆ ವರ್ತಿಸುತ್ತಿದ್ದಾರೆ. ಆದರೆ, ನಂಬರ್ ವನ್ ಭಯೋತ್ಪಾದಕನಾಗಿರುವ ಇರಾನ್ ಜೊತೆ ಒಬಾಮ ಒಪ್ಪಂದ ಮಾಡಿಕೊಳ್ಳಬಹುದು, ಯಾವುದೇ ಸಮಸ್ಯೆಯಿಲ್ಲ'' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಅವರಿಗೆ 2.41 ಕೋಟಿ ಫಾಲೋವರ್‌ಗಳಿದ್ದಾರೆ.