×
Ad

ಸ್ಕಾಟ್‌ಲ್ಯಾಂಡ್ ಸ್ವಾತಂತ್ರಕ್ಕೆ 2ನೆ ಮತ ಇಲ್ಲ: ಬ್ರಿಟನ್

Update: 2017-02-08 21:15 IST

ಲಂಡನ್, ಫೆ. 8: ಬ್ರಿಟನ್‌ನಿಂದ ಸ್ಕಾಟ್‌ಲ್ಯಾಂಡ್ ಸ್ವತಂತ್ರವಾಗುವುದಕ್ಕೆ ಸಂಬಂಧಿಸಿ ಎರಡನೆ ಜನಮತಗಣನೆಯನ್ನು ನಡೆಸುವ ಉದ್ದೇಶ ಬ್ರಿಟಿಶ್ ಸರಕಾರಕ್ಕಿಲ್ಲ ಎಂದು ಪ್ರಧಾನಿ ತೆರೇಸಾ ಮೇ ಅವರ ವಕ್ತಾರೆ ಬುಧವಾರ ಹೇಳಿದ್ದಾರೆ.

ಇನ್ನೊಂದು ಜನಮತಗಣನೆಗೆ ತಾನು ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ಹೊರಬಿದ್ದಿದೆ.

ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಹೋಗುತ್ತಿರುವ ಹಿನ್ನೆಲೆಯಲ್ಲಿ, ಬ್ರಿಟನ್‌ನಿಂದ ಹೊರಹೋಗಲು ಸ್ಕಾಟ್‌ಲ್ಯಾಂಡ್ ಬಯಸುತ್ತಿದೆ ಎಂಬುದನ್ನು ತೋರಿಸುವ ಸಮೀಕ್ಷೆಯೊಂದು ಬುಧವಾರ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News