ಇರಾನ್ ಸೇನೆಯನ್ನು ಉಗ್ರ ಗುಂಪಿಗೆ ಸೇರಿಸಲು ಅಮೆರಿಕ ಪರಿಶೀಲನೆ
Update: 2017-02-08 21:26 IST
ವಾಶಿಂಗ್ಟನ್, ಫೆ. 8: ಇರಾನ್‌ನ ಶಕ್ತಿಶಾಲಿ ಸೇನಾ ಘಟಕ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ)ನ್ನು ಭಯೋತ್ಪಾದಕ ಸಂಘಟನೆ ಎಂಬುದಾಗಿ ಘೋಷಿಸುವ ಪ್ರಸ್ತಾಪವೊಂದನ್ನು ಅಮೆರಿಕದದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಡಳಿತ ಪರಿಶೀಲಿಸುತ್ತಿದೆ.
ಇಂಥ ಪ್ರಸ್ತಾಪದ ಬಗ್ಗೆ ಅಮೆರಿಕ ಸರಕಾರದ ಹಲವಾರು ಸಂಸ್ಥೆಗಳೊಂದಿಗೆ ಸಮಾಲೋಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಪ್ರಸ್ತಾಪ ಜಾರಿಗೆ ಬಂದರೆ, ಈಗಾಗಲೇ ಅಮೆರಿಕ ಸರಕಾರದ ದಿಗ್ಬಂಧನಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪಟ್ಟಿಗೆ ಐಆರ್‌ಜಿಎಸ್ ಕೂಡ ಸೇರಿದಂತಾಗುತ್ತದೆ.