×
Ad

ಯೋಧರೊಂದಿಗೆ ಊಟ ಮಾಡುವಂತೆ ಅರೆ ಸೇನಾಪಡೆಗಳ ಅಧಿಕಾರಿಗಳಿಗೆ ಸೂಚನೆ

Update: 2017-02-08 23:28 IST

ಹೊಸದಿಲ್ಲಿ,ಫೆ.8: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ, ಭದ್ರತಾ ಪಡೆಗಳಿಗೆ ಕಳಪೆ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ಆರೋಪಿಸಿದ್ದ ಬಿಎಸ್‌ಎಫ್ ಯೋಧನ ವೀಡಿಯೊದ ಹಿನ್ನೆಲೆಯಲ್ಲಿ ಠಾಣೆಗಳ ಪರಿಶೀಲನೆಯ ತಮ್ಮ ಪ್ರವಾಸಗಳ ವೇಳೆ ಯೋಧರೊಂದಿಗೆ ಊಟ ಮಾಡುವಂತೆ ಗೃಹ ಸಚಿವಾಲಯವು ಕೇಂದ್ರೀಯ ಅರೆಮಿಲಿಟರಿ ಪಡೆಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ.
ಬುಧವಾರ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದ ಸಹಾಯಕ ಗೃಹಸಚಿವ ಕಿರಣ್ ರಿಜಿಜು, ಅಧಿಕಾರಿಗಳು ಠಾಣೆಗಳಿಗೆ ತಮ್ಮ ಭೇಟಿ ಸಂದರ್ಭದಲ್ಲಿ ಯೋಧರ ವಾಸಸ್ಥಿತಿ, ಅವರ ಉಡುಪುಗಳು ಮತ್ತು ಉಪಕರಣಗಳ ಬಗ್ಗೆಯೂ ಗಮನ ಹರಿಸುವಂತೆ ನೋಡಿ ಕೊಳ್ಳಬೇಕೆಂದು ಪಡೆಗಳಿಗೆ ನಿರ್ದೇಶ ನೀಡಲಾಗಿದೆ ಎಂದರು.
ಸಿಬ್ಬಂದಿಯಿಂದ ಮುಕ್ತ ಮರುಮಾಹಿತಿಗಳನ್ನು ಪಡೆಯಲು ಉಪಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News