×
Ad

ರೈತರು ‘ಬುರೆ ದಿನ್’ ಎದುರಿಸುತ್ತಿದ್ದಾರೆ: ರಾಹುಲ್

Update: 2017-02-08 23:29 IST

ಹತ್ರಾಸ್(ಉ.ಪ್ರ),ಫೆ.8: ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದಿಲ್ಲಿ ಟೀಕಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು, ಅವರ ‘ಅಚ್ಚೆ ದಿನ್(ಒಳ್ಳೆಯ ದಿನಗಳು)’ ಭರವಸೆಯು ಕೈಗಾರಿಕೋದ್ಯಮಿಗಳ ಪಾಲಿಗೆ ಮಾತ್ರ ಈಡೇರಿದ್ದು, ದೇಶದ ರೈತರು ‘ಬುರೆ ದಿನ್(ಕೆಟ್ಟ ದಿನಗಳು)’ಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ತೀವ್ರ ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ ಎಂದರು. ಉತ್ತರ ಪ್ರದೇಶದಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ ಮುಂದಿನ ಸರಕಾರವನ್ನು ರಚಿಸಲಿದೆ ಎಂಬ ವಿಶ್ವಾಸವನ್ನು ಅವರು ಇದೇ ವೇಳೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News