×
Ad

ಬ್ಯಾಂಕ್ ಸಾಲಪಾವತಿಸದವರ ಮನೆ ಮುಂದೆ ಬ್ಯಾಂಕ್ ಅಧಿಕಾರಿಗಳಿಂದಲೇ ಪ್ರತಿಭಟನೆ

Update: 2017-02-09 17:13 IST

ಕೊಚ್ಚಿ,ಫೆ. 9: ಸಾಲ ಮರುಪಾವತಿ ಮಾಡದವರ ಮನೆಮುಂದೆ ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದಾರೆ. ಕೆಥೊಲಿಕ್ ಸಿರಿಯನ್ ಬ್ಯಾಂಕ್ ಉದ್ಯೋಗಿಗಳು ಸಾಲ ಮರುಪಾವತಿಗೆ ಅಳವಡಿಸಿಕೊಂಡ ಹೊಸ ವಿಧಾನ ಇದು ಎನ್ನಲಾಗಿದೆ.

 ಇಡಪ್ಪಳ್ಳಿ ಪೊನ್ನೊಕ್ಕರದ ಬ್ಯಾಂಕ್ ವ್ಯವಹಾರಸ್ಥನ ಮನೆಯ ಮುಂದೆ ಬ್ಯಾಂಕ್ ಉದ್ಯೋಗಿಗಳು ಧರಣಿ ಕೂತರು. ಬ್ಯಾಂಕ್‌ಗೆ ಬರಬೇಕಾದ 470 ಕೋಟಿ ರೂಪಾಯಿ ಸಾಲದ ವಸೂಲಾತಿಗೆ ಇವರು ಈ ದಾರಿಯನ್ನು ಕಂಡು ಕೊಂಡಿದ್ದಾರೆ.

ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚು ಸಾಲಪಡೆದು ಮರುಪಾವತಿ ಮಾಡದ ಬ್ಯಾಂಕ್ ಗ್ರಾಹಕರ ಮನೆ ಮುಂದೆ ಬ್ಯಾಂಕಿನವರು ಪ್ರತಿಭಟನೆನಡೆಸುತ್ತಿದ್ದಾರೆ. ಇದಕ್ಕಾಗಿ ಕೇರಳದಲ್ಲಿ ಮೂರುವರ್ಷಗಳಿಂದ ಬ್ಯಾಂಕ್‌ಗೆ ಸಾಲದ ಮರುಪಾವತಿ ಮಾಡದ 35 ಮಂದಿಯ ಮನೆಯನ್ನು ಬ್ಯಾಂಕ್ ಅಧಿಕಾರಿಗಳು ಪ್ರತಿಭಟನೆಗೆ ಆಯ್ಕೆ ಮಾಡಿಕೊಂಡಿದ್ದಾರೆ.ತೃಶೂರ್, ಕಲ್ಲಿಕೋಟೆ, ಮಲಪ್ಪುರಂ, ಎರ್ನಾಕುಲಂ,ಇಡುಕ್ಕಿ, ತಿರುವನಂತಪುರಂ ಮೊದಲಾದ ಇಪ್ಪತ್ತು ಕಡೆಗಳಲ್ಲಿಪ್ರತಿಭಟನೆ ನಡೆಯುತ್ತಿದೆ.

  ಬ್ಯಾಂಕ್‌ಗೆ ಪಾವತಿಯಾಗದ ಸಾಲದಲ್ಲಿ ಹೆಚ್ಚಳ ಮತ್ತು ಠೇವಣಿ ಸಂಗ್ರಹ ಕಡಿಮೆ ಆದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬ್ಯಾಂಕ್ ನಷ್ಟದಿಂದ ನಡೆಯುತ್ತಿದೆ. ಬ್ಯಾಂಕ್‌ಗಾದ ಅಗಾಧ ನಷ್ಟದಿಂದಾಗಿ ನೌಕರರಿಗೆ ಸಂಬಳವನ್ನುಕೊಡಲು ಆಗದ ಸ್ಥಿತಿ ನಿರ್ಮಾಣಗೊಂಡಿತ್ತು. ಆದ್ದರಿಂದ ಸಾಲವಸೂಲಾತಿಗೆ ಏನುಮಾಡುವುದೆಂದು ಬ್ಯಾಂಕ್ ಮ್ಯಾನೆಜ್ ಮೆಂಟ್ ತಮ್ಮ ನೌಕರರ ಅಭಿಪ್ರಾಯವನ್ನು ಕೇಳಿತ್ತು. ಪ್ರತಿಯೊಬ್ಬ ಉದ್ಯೋಗಿಯು ನಿಶ್ಚಿತ ಖಾತೆಯ ಮೇಲೆ ನಿಗಾವಿರಿಸಲು ತಿಳಿಸಲಾಯಿತು. ಸಾಲ ಮರುಪಾವತಿ ಶಕ್ತಿ ಇದ್ದರೂಪಾವತಿಸದವರೇ ಸಾಲಗಾರರಲ್ಲಿ ಹೆಚ್ಚು ಮಂದಿಯಿದ್ದಾರೆಂದು ತಿಳಿದು ಬಂತು. ಬ್ಯಾಂಕ್‌ನವರ ಪ್ರತಿಭಟನೆಗೆ ಬ್ಯಾಂಕ್‌ನಿಂದ ನಿವೃತ್ತರಾದವರು ಬೆಂಬಲಘೋಷಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗುರುವಾರ ಬೆಳಗ್ಗೆ 9:30ರಿಂದ 10:30ರವರೆಗೆ ಬ್ಯಾಂಕ್ ನೌಕರರು ಪ್ರತಿಭಟನೆನಡೆಸಿದ್ದಾರೆ. ಆಯಾ ಶಾಖೆಗಳ ವ್ಯವಹಾರಗಳಿಗೆ ಅಗತ್ಯವಿರುವಷ್ಟು ಸಿಬ್ಬಂದಿಗೆ ಕಛೇರಿವಹಿಸಿಕೊಟ್ಟು ಬಾಕಿ ಉಳಿದ ಉದ್ಯೋಗಿಗಳು ಪ್ಲೇಕಾರ್ಡ್ ಹಿಡಿದು ಪ್ರತಿಭಟನೆಗೆ ಹೊರಡುತ್ತಾರೆ. ಮುಂದಿನ ಹಂತದಲ್ಲಿ ಬ್ಯಾಂಕ್ ಉದ್ಯೋಗಿಗಳ ಮನೆಯವರನ್ನು ಕೂಡಾ ಪ್ರತಿಭಟನೆಯಲ್ಲಿ ಸೇರಿಸಿ ಭಾರೀ ಪ್ರತಿಭಟನೆ ನಡೆಸುವ ಸಿದ್ಧತೆ ನಡೆಯುತ್ತಿದೆ.

 ಸಾಲಪಡೆದವರನ್ನು ವೈಯಕ್ತಿಕವಾಗಿ ಅಪಮಾನ ಮಾಡುವುದು ನಮ್ಮ ಉದ್ದೇಶವಲ್ಲ, ಬದಲಾಗಿ ಬ್ಯಾಂಕನ್ನು ಉಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಬ್ಯಾಂಕ್ ಉದ್ಯೋಗಿಗಳು ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನೆ ನಡೆಸುವುದು ಬೇಡ ನಾವು ಹಣ ಮರುಪಾವತಿ ಮಾಡುತ್ತೇವೆ ಎಂದು ಕೆಲವು ಮಂದಿ ಸಾಲಗಾರರು ಬ್ಯಾಂಕಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News