ಶಶಿಕಲಾ ಒತ್ತಾಯಕ್ಕೆ ಮಣಿದು ರಾಜೀನಾಮೆ ಸಲ್ಲಿಕೆ: ಒಪಿಎಸ್ ರಾಜ್ಯಪಾಲರಿಗೆ ದೂರು
Update: 2017-02-09 17:16 IST
ಚೆನ್ನೈ, ಫೆ.10: ತಮಿಳುನಾಡು ಉಸ್ತುವಾರಿ ಮುಖ್ಯ ಮಂತ್ರಿ ಒ.ಪನ್ನೀರ‍್ ಸೆಲ್ವಂ ಇಂದು ರಾಜ್ಯ ಪಾಲ ಸಿ.ಎಚ್. ವಿದ್ಯಾಸಾಗರ‍್ ಅವರನ್ನು ಭೇಟಿಯಾಗಿ ತಾನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಒತ್ತಾಯಕ್ಕೆ ಮಣಿದು ರಾಜೀನಾಮೆ ನೀಡಿರುವುದಾಗಿ ದೂರು ನೀಡಿದ್ದಾರೆ.
ಮಾಜಿ ಸ್ವೀಕರ‍್ ಪಿ.ಎಚ್. ಪಾಂಡಿಯನ್ ಮತ್ತು ಪಕ್ಷದ ಧುರೀಣ ಮಧುಸೂದನ್ ಅವರು ಒ.ಪನ್ನೀರ‍್ ಸೆಲ್ವಂ ಅವರಿಗೆ ಸಾಥ್ ನೀಡಿದರು.
ರಾಜ್ಯಪಾಲರಿಗೆ ಸಂಪೂರ್ಣ ವಿವರ ನೀಡಿದ ಸೆಲ್ವಂ ಅವರು "ಶಶಿಕಲಾ ಸರಕಾರ ಮತ್ತು ಎಐಎಡಿಎಂಕೆ ಪಕ್ಷವನ್ನು ಕಬಳಿಸಲು ತಂತ್ರ ಹೂಡಿದ್ದಾರೆ.
ಜಯಲಲಿತಾ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಗವರ್ನರನ್ನು ಒತ್ತಾಯಿಸಿದ ಮಾಜಿ ಸ್ವೀಕರ‍್ ಪಿ.ಎಚ್. ಪಾಂಡಿಯನ್ ಶಶಿಕಲಾ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು