×
Ad

ಫ್ರಾನ್ಸ್‌ನ ಅಣುಸ್ಥಾವರದಲ್ಲಿ ಸ್ಫೋಟ

Update: 2017-02-09 20:34 IST

ಕೇನ್, ಫೆ.9: ಫ್ರಾನ್ಸ್‌ನ ವಾಯುವ್ಯ ಕಡಲ ತೀರದಲ್ಲಿರುವ ಪರಮಾಣು ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು ಆದರೆ ವಿಕಿರಣದ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಚೆರ್ಲ್‌ಬರ್ಗ್ ಬಂದರಿನಿಂದ 15 ಮೈಲು ದೂರದಲ್ಲಿರುವ ಫ್ಲೇಮನ್‌ವಿಲ್ಲೆ ಸ್ಥಾವರದ ಇಂಜಿನ್ ರೂಂನಲ್ಲಿ ಸ್ಫೋಟ ಸಂಭವಿಸಿದೆ. ಇದು ಪರಮಾಣು ದುರಂತವಲ್ಲ. ಸ್ಥಾವರದ ಅಣುವಲಯದ ಹೊರವ್ಯಾಪ್ತಿಯ ಕೋಣೆಯ ವೆಂಟಿಲೇಟರ್ ಸ್ಫೋಟಗೊಂಡಿದೆ . ಸ್ಫೋಟದ ಬಳಿಕ ಎರಡು ಜಲ ಒತ್ತಡದ ರಿಯಾಕ್ಟರ್‌ಗಳ ಪೈಕಿ ಒಂದನ್ನು ಮುಚ್ಚಲಾಗಿದೆ ಎಂದು ಹಿರಿಯ ಅಧಿಕಾರಿ ಜಾಕಸ್ ವಿಟ್‌ಕೋವ್‌ಸ್ಕಿ ತಿಳಿಸಿದ್ದಾರೆ.

ಹೊಗೆ ಸೇವಿಸಿದ ಐವರಿಗೆ ಸ್ವಲ್ಪ ತೊಂದರೆಯಾಗಿದೆ. ಆದರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News