×
Ad

ಬ್ರೆಕ್ಸಿಟ್‌ಗೆ ವಿದಾಯ: ಬ್ರಿಟನ್ ಸಂಸತ್ತಿನ ಕೆಳಮನೆ ಅನುಮೋದನೆ

Update: 2017-02-09 21:08 IST

ಲಂಡನ್, ಫೆ.9: ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಮಸೂದೆಗೆ ಬ್ರಿಟನ್ ಸಂಸತ್ತಿನ ಕೆಳಮನೆ ಅನುಮೋದನೆ ನೀಡಿದ್ದು, ಇದರಿಂದ ಯರೋಪಿಯನ್ ಒಕ್ಕೂಟದಿಂದ ನಿರ್ಗಮಿಸುವ ಪ್ರಕ್ರಿಯೆ ಕುರಿತು ಮಾತುಕತೆ ಆರಂಭಿಸಲು ಸರಕಾರಕ್ಕೆ ಒಪ್ಪಿಗೆ ದೊರೆತಂತಾಗಿದೆ.

ಮಸೂದೆಯ ಪರ-ವಿರೋಧದ ಮತಗಳನ್ನು ಲೆಕ್ಕಾಚಾರ ಮಾಡುತ್ತಿರುವಂತೆಯೇ ಯುರೋಪಿಯನ್ ಒಕ್ಕೂಟದ ಪರವಾಗಿರುವ ಕೆಲ ಸದಸ್ಯರು ಬೀಥೊವೆನ್‌ನ ‘ಓಡ್ ಟು ಜಾಯ್’ ಕವಿತೆಯ ಸಾಲುಗಳನ್ನು ಶಿಳ್ಳು ಹಾಕಿದರು.

494-122 ಮತಗಳ ಭಾರೀ ಅಂತರದಿಂದ ಮಸೂದೆ ಕೆಳಮನೆಯಲ್ಲಿ ಅಂಗೀಕೃತಗೊಂಡಿತು. ಮುಂದೆ ಈ ಮಸೂದೆ ಬ್ರಿಟನ್‌ನ ಸಂಸತ್ತು ‘ ಹೌಸ್ ಆಫ್ ಲಾರ್ಡ್ಸ್’ನಲ್ಲಿ ಮಂಡನೆಯಾಗಲಿದೆ. ಇಲ್ಲಿ ಈ ಮಸೂದೆಯನ್ನು ತಿರಸ್ಕರಿಸುವ ಅಧಿಕಾರವಿಲ್ಲ, ಆದರೆ ಮಸೂದೆ ಜಾರಿಗೆ ವಿಳಂಬ ತರುವ ಅವಕಾಶವಿದೆ. ಈ ಮಸೂದೆಯನ್ನು ವಾರದೊಳಗೆ ಕಾನೂನು ಆಗಿ ಮಾರ್ಪಡಿಸಬೇಕಿದೆ.

ಕಳೆದ ವಾರ ನಡೆದ ಮತದಾದಲ್ಲಿ ಮಸೂದೆಗೆ 498-114 ಮತದ ಬೆಂಬಲ ದೊರೆತಿತ್ತು. ಮಸೂದೆ ಮಂಡನೆಗೆ ಮೊದಲು ಮೂರು ದಿನಗಳ ಚರ್ಚೆ ನಡೆದಿತ್ತು. ವಿರೋಧ ಪಕ್ಷದ ಸದಸ್ಯರು ಮಸೂದೆಯಲ್ಲಿ ಕೆಲವೊಂದು ತಿದ್ದುಪಡಿಯನ್ನು ಬಯಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News