×
Ad

ಜಿಯಾ ಪ್ರಕರಣ:ಸಿಬಿಐ ಆರೋಪ ಪಟ್ಟಿಯನ್ನು ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

Update: 2017-02-09 21:41 IST

ಮುಂಬೈ,ಫೆ.9: ಬಾಲಿವುಡ್ ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಾಗಿದೆ ಮತ್ತು ಅದು ಕೊಲೆಯಲ್ಲ ಎಂದು ಸ್ಪಷ್ಟಪಡಿಸಿ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪ್ರಶ್ನಿಸಿ ತಾಯಿ ರಾಬಿಯಾ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ವು ಗುರುವಾರ ವಜಾಗೊಳಿಸಿತು. ಇದರೊಂದಿಗೆ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿಯ ವಿಚಾರಣೆಗೆ ಮಾರ್ಗ ಸುಗಮಗೊಂಡಿದೆ.

ಜಿಯಾ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪವನ್ನು ಸೂರಜ್ ವಿರುದ್ಧ ಹೊರಿಸಲಾಗಿದೆ.

ರಾಬಿಯಾ ಅರ್ಜಿ ವಿಚಾರಣೆಗೆ ಬಾಕಿಯಿದ್ದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯವು ಕೆಳ ನ್ಯಾಯಾಲಯದಲ್ಲಿ ಸೂರಜ್ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು.

 2013,ಜೂ.3ರಂದು ಸಂಭವಿಸಿದ್ದ ಜಿಯಾ ಸಾವು ಆತ್ಮಹತ್ಯೆಯಲ್ಲ,ಆಕೆಯನ್ನು ಬಾಯ್‌ಫ್ರೆಂಡ್ ಆಗಿದ್ದ ಸೂರಜ್ ಹತ್ಯೆ ಮಾಡಿದ್ದರು ಎಂದು ರಾಬಿಯಾ ಆರೋಪಿಸಿ ದ್ದರು. ಉಚ್ಚ ನ್ಯಾಯಾಲಯದ ನಿಗಾದಡಿ ವಿಶೇಷ ತನಿಖಾ ತಂಡದಿಂದ ಪ್ರಕರಣದ ತನಿಖೆ ನಡೆಸಬೇಕು ಎಂದು ಅವರು ಕೋರಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News