ಉಪ್ಪಿನಂಗಡಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಹೆದ್ದಾರಿ ತಡೆ

Update: 2017-02-09 18:32 GMT

ಉಪ್ಪಿನಂಗಡಿ, ೆ.9: ಇಳಂತಿಲ ಗ್ರಾಮದ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ವಾಣಿನಗರ ಯುವಕಮಂಡಲದ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ಇಳಂತಿಲ ಗ್ರಾಮ ವ್ಯಾಪ್ತಿಯಲ್ಲಿ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಿದರು.

  ಈ ಸಂದರ್ಭ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ಗ್ರಾಮದ ಪ್ರಧಾನ ರಸ್ತೆ ಯಾದ ಇಳಂತಿಲ-ಉಂತನಾಜೆ ರಸ್ತೆಗೆ 2008ರಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಡಾಮರು ಕಾಮಗಾರಿ ನಡೆಸಲಾಗಿದೆ. ಇದರ ನಿರ್ವಹಣೆ ಅವ ಮುಗಿದ ಬಳಿಕ ಯಾರೂ ಈ ರಸ್ತೆಯತ್ತ ಗಮನ ಹರಿಸಿಲ್ಲ. ಇದರಿಂದಾಗಿ ಈ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಪಂ, ತಾಪಂ, ಜಿಪಂಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಇದೀಗ ಗ್ರಾಮಸ್ಥರಲ್ಲಾ ಒಗ್ಗೂಡಿ ನಮ್ಮ ಗ್ರಾಮದ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯವನ್ನಾಗಿಸಿ ಎಂಬ ಏಕ ವಾಕ್ಯದ ಬೇಡಿಕೆಯೊಂದಿಗೆ ಹೋರಾಟಕ್ಕಿಳಿದ್ದೇವೆ ಎಂದರು.

ಬಳಿಕ ಸ್ಥಳಕ್ಕಾಗಮಿಸಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರವೀಂದ್ರ ಕಿಣಿ, ತಕ್ಷಣಕ್ಕೆ 2 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿ, ರಸ್ತೆಯ ಹೊಂಡಗುಂಡಿಗಳಿಗೆ ತೇಪೆ ಹಚ್ಚುವ ಕಾರ್ಯ ನಡೆಸಲಾಗುವುದು ಎಂದು ಭರವಸೆ ನೀಡಿದರಲ್ಲದೆ, ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.

 ಬಳಿಕ ಧರಣಿ ಹಿಂಪಡೆಯಲು ಒಪ್ಪಿದ ರಸ್ತೆ ತಡೆ ನಿರತರು, ರಸ್ತೆ ದುರಸ್ತಿ ಕಾರ್ಯ ತಕ್ಷಣದಿಂದಲೇ ಆರಂಭಿಸಬೇಕು. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಶೀಘ್ರದಲ್ಲೇ ರಸ್ತೆ ದುರಸ್ತಿಯಾಗದಿದ್ದರೆ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಇಳಂತಿಲ- ಉಂತನಾಜೆ ರಸ್ತೆ ದುರಸ್ತಿಯಾಗುವವರೆಗೆ ಪಂಚಾಯತ್ ಸೇರಿದಂತೆ ಸರಕಾರಕ್ಕೆ ಯಾವುದೇ ರೀತಿಯ ತೆರಿಗೆಯನ್ನು ಕಟ್ಟುವುದಿಲ್ಲ ಹಾಗೂ ಇತರ ಸರಕಾರಿ ಕಾರ್ಯಕ್ರಮಗಳನ್ನು ಗ್ರಾಮ ವ್ಯಾಪ್ತಿಯಲ್ಲಿ ನಡೆಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರೆಲ್ಲಾ ಒಗ್ಗೂಡಿ ತೀರ್ಮಾನ ಕೈಗೊಂಡಿದ್ದಾರೆ.

 ಜಿಪಂ ಅಧ್ಯಕ್ಷೆ ಭವಾನಿ ಚಿದಾನಂದ ಹಾಗೂ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಪ್ರತಿಭಟನಾ ಸ್ಥಳ ಕ್ಕಾಗಮಿಸಿ ಪ್ರತಿಭಟನಾಕರಿಗೆ ಬೆಂಬಲ ಸೂಚಿಸಿ ದರು. ಸಾಮಾಜಿಕ ಕಾರ್ಯ ಕರ್ತ ವಿಠಲ ಭಟ್ ಮೂಡಾಜೆ, ರವಿ ಇಳಂತಿಲ ಮಾತನಾಡಿದರು. ವಿನ್ಸೆಂಟ್ ್ರಾಕ್ಸ್, ಯುವಕ ಸಂಘದ ಅಧ್ಯಕ್ಷ ಕಾರ್ತಿಕ್ ಗೌಡ, ಗೌರವಾಧ್ಯಕ್ಷ ಜನಾರ್ದನ ಗೌಡ ಅಣ್ಣಾಜೆ, ಕಾರ್ಯದರ್ಶಿ ಪ್ರೀತಂ, ಅಬ್ಬಾಸ್ ಅಂಡೆತ್ತಡ್ಕ, ವಿಜಯಕುಮಾರ್ ಕಲ್ಲಳಿಕೆ, ಹರೀಶ್ಚಂದ್ರ ಆಚಾರ್ಯ, ನಾರಾಯಣ ಗೌಡ, ಪ್ರಸಾದ್ ಕೆ.ವಿ., ರಾಜಗೋಪಾಲ್ ಭಟ್ ಕೈಲಾರ್ ಭಾಗವಹಿಸಿದ್ದರು.

ಯುವಕ ಸಂಘದವರು, ನಾನು ಸೇರಿದಂತೆ ಗ್ರಾಮದ ಪ್ರಮುಖರನ್ನು ಸೇರಿಸಿಕೊಂಡು ಸಭೆ ಕರೆದು ತೆಗೆದುಕೊಂಡ ನಿರ್ಣಯವನ್ನು ಗಾಳಿಗೆ ತೂರಿದ್ದು, ಗುರುವಾರ ರಾಜಕೀಯ ಪ್ರೇರಿತ ಧರಣಿ ನಡೆಸಿದ್ದಾರೆ. ಯುವಕ ಮಂಡಲದ ಆಶ್ರಯದಲ್ಲಿ ೆ.5ರಂದು ನಡೆದ ಗ್ರಾಮದ ಪ್ರಮುಖರ ಸಭೆಯಲ್ಲಿ ೆ.9ರಂದು ಸಾಂಕೇತಿಕವಾಗಿ ಧರಣಿ ನಡೆಸುವುದಾಗಿ ನಿರ್ಣಯಿಸಲಾಗಿತ್ತು. ಅದೇ ದಿನ ಮಧ್ಯಾಹ್ನ ಯುವಕ ಮಂಡಲದ ನಿಯೋಗ ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರರನ್ನು ಭೇಟಿ ಮಾಡಿದಾಗ ಅವರು ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದ್ದರಿಂದ ಮತ್ತೊಮ್ಮೆ ಯುವಕಮಂಡಲದವರು ಹಾಗೂ ನಾನು ಸೇರಿದಂತೆ ಗ್ರಾಮದ ಪ್ರಮುಖರು ೆ.8ರಂದು ತುರ್ತು ಸಭೆ ಸೇರಿ ರಸ್ತೆ ತಡೆಯನ್ನು ಕೈಬಿಟ್ಟು ಸೇರಿದ ಜನತೆಗೆ ಗ್ರಾಪಂ ಅಧ್ಯಕ್ಷರು ಶಾಸಕರ ಭರವಸೆಯನ್ನು ತಿಳಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಇಲ್ಲಿ ದಿನಬೆಳಗಾಗುವುದರೊಳಗೆ ನಿರ್ಣಯವನ್ನು ಬದಲಾಯಿಸಿ ರಸ್ತೆ ತಡೆ ನಡೆಸಿ, ಸಾರ್ವಜನಿಕರಿಗೆ ತೊಂದರೆ ಮಾಡಲಾಗಿದೆ. ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸುವ ಮೂಲಕ ಇದಕ್ಕೆ ಗ್ರಾಮದ ಎಲ್ಲರ ಬೆಂಬಲ ಇತ್ತು ಎಂದು ಘೋಷಿಸಿದ್ದಾರೆ. ಈ ಬಗ್ಗೆ ಶಾಸಕರಿಗೆ ಗ್ರಾಪಂ ವತಿಯಿಂದ ದೂರು ನೀಡಲಾಗುವುದು ಹಾಗೂ ರಸ್ತೆ ದುರಸ್ತಿಗಾಗಿ ಮನವಿಯನ್ನೂ ಮಾಡಲಾಗುವುದು. ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

-ಯು.ಕೆ. ಇಸುಬು

                                        ಇಳಂತಿಲ ಗ್ರಾಪಂ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News