12-18: ಉತ್ಪಾದನಾ ಸಪ್ತಾಹ ಕಾರ್ಯಕ್ರಮ

Update: 2017-02-09 18:37 GMT

ಮಂಗಳೂರು, ಫೆ.9: ಮಂಗಳೂರು ಉತ್ಪಾದಕತೆಯ ಕೌನ್ಸಿಲ್(Mangalore Productivity Council) ವತಿಯಿಂದ 12ರಂದು ನಡೆಯಲಿರುವ ಉತ್ಪಾದನಾ ದಿನಾಚರಣೆಯ ಸಪ್ತಾಹದ ಪ್ರಯುಕ್ತ 12ರಿಂದ 18ರವರೆಗೆ ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಮಂಗಳೂರು ಉತ್ಪಾದಕತೆಯ ಕೌನ್ಸಿಲ್‌ನ ಅಧ್ಯಕ್ಷ ಯು. ರಾಮರಾವ್ ತಿಳಿಸಿದ್ದಾರೆ.

 ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಉತ್ಪಾದನಾ ದಿನಾಚರಣೆಯ ಸಪ್ತಾಹವನ್ನು ‘ತ್ಯಾಜ್ಯದ ಮರುಬಳಕೆಯಿಂದ ಲಾಭದತ್ತ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ೆ.12ರಂದು ಸಂಜೆ 5ಕ್ಕೆ ‘ಕಸದಿಂದ ರಸ’ ಕುರಿತು ಆಕಾಶವಾಣಿ ಕಾರ್ಯಕ್ರಮಗಳ ಕಾರ್ಯನಿರ್ವಾಹಕಾಕಾರಿ ಟಿ. ಶಾಮ್‌ಪ್ರಸಾದ್ ಹಾಗೂ ನಬಾರ್ಡ್‌ನ ಡಿಜಿಎಂ ಶ್ರೀಪತಿ ಕಲ್ಕೂರ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

 ೆ.14ರಂದು ಸಂಜೆ 6ಕ್ಕೆ ‘ಕೇಂದ್ರ ಬಜೆಟ್’ ಕುರಿತು ಚಾರ್ಟೆಡ್ ಅಕೌಂಟೆಂಟ್ ಎಸ್.ಎಸ್. ನಾಯಕ್, ೆ.15ರಂದು ಸಂಜೆ 6ಕ್ಕೆ ‘ಜನಸ್ನೇಹಿ ಬ್ಯಾಂಕ್ ಸಾಲ’ ಕುರಿತು ಕರ್ಣಾಟಕ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಪ್ರಕಾಶ್ ಕಾಮತ್ ಹಾಗೂ ೆ.17ರಂದು ಸಂಜೆ 6ಕ್ಕೆ ‘ಉತ್ತಮ ಆರೋಗ್ಯಕ್ಕಾಗಿ 10 ಸಲಹೆಗಳು’ ವಿಷಯವಾಗಿ ಡಾ. ಎಂ.ಆರ್. ಪ್ರಭಾ ಅಕಾರಿ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ಪಾದಕತೆಯ ಕೌನ್ಸಿಲ್‌ನ ಕಾರ್ಯದರ್ಶಿ ಪಿ.ಬಿ. ಸರಳಾಯ, ಸಂಚಾಲಕ ಬಿ.ಪ್ರಕಾಶ್ ರಾವ್, ಕೆ.ವಿ. ಸೀತಾರಾಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News