ರಶ್ಯ ಬಾಂಬ್‌ಗೆ 3 ಟರ್ಕಿ ಸೈನಿಕರು ಬಲಿ : ಕ್ಷಮೆ ಕೋರಿದ ವ್ಲಾದಿಮಿರ್ ಪುಟಿನ್
Update: 2017-02-10 21:31 IST
ಇಸ್ತಾಂಬುಲ್ (ಟರ್ಕಿ), ಫೆ. 10: ಸಿರಿಯದಲ್ಲಿನ ಕಟ್ಟಡವೊಂದರ ಮೇಲೆ ಗುರುವಾರ ರಶ್ಯದ ಯುದ್ಧ ವಿಮಾನವೊಂದು ನಡೆಸಿದ ಬಾಂಬ್ ದಾಳಿಯಲ್ಲಿ ಮೂವರು ಟರ್ಕಿ ಸೈನಿಕರು ಮೃತಪಟ್ಟಿದ್ದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿ ಸೇನೆ ತಿಳಿಸಿದೆ. ಈ ಕಟ್ಟಡದಲ್ಲಿ ಟರ್ಕಿಯ ಸೈನಿಕರನ್ನು ನಿಯೋಜಿಸಲಾಗಿತ್ತು
ಐಸಿಸ್ ನೆಲೆಗಳ ಮೇಲೆ ದಾಳಿ ನಡೆಸುವ ಉದ್ದೇಶವನ್ನು ಯುದ್ಧ ವಿಮಾನ ಹೊಂದಿತ್ತು, ಆದರೆ, ‘‘ತಪ್ಪಾಗಿ ನಮ್ಮ ಮೂವರು ಪರಾಕ್ರಮಿ ಸೈನಿಕರು ಬಲಿಯಾದರು ಎಂದು ಅದು ಹೇಳಿದೆ.
ಈ ಬಗ್ಗೆ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈಗಾಗಲೇ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರನ್ನು ಸಂಪರ್ಕಿಸಿ ಕ್ಷಮೆ ಕೋರಿದ್ದಾರೆ.
‘‘ಘಟನೆಯು ಆಕಸ್ಮಿಕವಾಗಿತ್ತು ಎಂಬುದಾಗಿ ರಶ್ಯದ ಅಧಿಕಾರಿಗಳು ಹೇಳಿದ್ದಾರೆ ಹಾಗೂ ಅದಕ್ಕಾಗಿ ಸಂತಾಪ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ’’ ಎಂದು ಸೇನೆ ತಿಳಿಸಿದೆ.
ಎರಡೂ ಕಡೆಗಳಿಂದ ವಿಚಾರಣೆ ನಡೆಯುತ್ತಿದೆ ಎಂದಿದೆ.