ಗೃಹ ಉತ್ಪನ್ನಗಳ ತರಬೇತಿಗೆ ಅರ್ಜಿ ಆಹ್ವಾನ

Update: 2017-02-10 18:33 GMT

ಮಣಿಪಾಲ, ೆ.10: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಆಸಕ್ತ ಮಹಿಳೆ ಯರು ಹಾಗೂ ಯುವತಿಯರಿಗೆ ೆ.27ರಿಂದ ಮಾ.3ರವರೆಗೆ ಗೃಹ ಉತ್ಪನ್ನ ಗಳಾದ ಸಾಂಬಾರು ಹುಡಿ, ಹಪ್ಪಳ, ಜ್ಯಾಮ್, ಸಂಡಿಗೆ, ಫಿನಾಯಿಲ್ ತಯಾರಿಕೆ, ಪೇಪರ್ ಮತ್ತು ಬಟ್ಟೆ ಬ್ಯಾಗ್‌ಗಳ ತಯಾರಿಕೆ ಹಾಗೂ ಗೃಹ ನಿರ್ವಹಣೆಯ ಕುರಿತು 5 ದಿನಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಸ್ವಉದ್ಯೋಗ ಕೈಗೊಳ್ಳಲು ಇಚ್ಛಿಸುವ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತಿಯ ಸಮಯದಲ್ಲಿ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯಿದೆ.

ಆಸಕ್ತರು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಅಂಬಾಗಿಲು ರಸ್ತೆ, ಉಡುಪಿ (ದೂರವಾಣಿ:0820-2570263) ಇಲ್ಲಿಗೆ ಸಂಪರ್ಕಿಸುವ ಮೂಲಕ ೆ.22ರೊಳಗೆ ದೃಢೀಕರಿಸಬೇಕು. ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ೆ.27ರಂದು ಬೆಳಗ್ಗೆ 9:30ಕ್ಕೆ ಬಿವಿಟಿಯಲ್ಲಿ ಹಾಜರಿರಬೇಕು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News