ಕೇಂದ್ರದಿಂದ ಹಿಂದೂ ರಾಷ್ಟ್ರದ ಗುಪ್ತ ಅಜೆಂಡಾ ಜಾರಿ: ವಸಂತ ಆಚಾರಿ

Update: 2017-02-10 18:40 GMT

ಮೂಡುಬಿದಿರೆ, ೆ.10: ಹಿಂದುತ್ವದ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳುತ್ತಿರುವ ಕೇಂದ್ರ ಸರಕಾರ ಜಾತ್ಯತೀತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿದೆ. ಅಲ್ಲದೆ ಸಂವಿಂಧಾನ ಪುನರ್ ರಚನೆಯ ಹುನ್ನಾರದಲ್ಲಿದೆ ಎಂದು ಸಿಪಿಐ(ಎಂ)ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದರು. ಅವರು ಮೂಡುಬಿದಿರೆಯ ಬಸ್ ನಿಲ್ದಾಣದ ಬಳಿ ಶುಕ್ರವಾರ ಸಿಪಿಐ(ಎಂ) ವತಿಯಿಂದ ನಡೆದ ಕೇಂದ್ರ ಸರಕಾರದ ಜನ ವಿರೋ ನೀತಿಗಳ ವಿರುದ್ಧ ಮತ್ತು 500, 1000 ನೋಟುಗಳನ್ನು ಅಮಾನ್ಯಗೊಳಿಸಿರುವ ನಂತರದ ಬೆಳವಣಿಗೆಗಳ ಬಗ್ಗೆ ಹಕ್ಕೊತ್ತಾಯ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಸಾಮಾನ್ಯರಿಗೆ ಪೂರಕ ವ್ಯವಸ್ಥೆ ಗಳನ್ನು ಜಾರಿಗೆ ತರಬೇಕಿದ್ದ ನರೇಂದ್ರ ಮೋದಿ ಸರಕಾರ 500, 1,000 ರೂ. ನೋಟುಗಳನ್ನು ಅಮಾನ್ಯ ಮಾಡುವ ಮೂಲಕ ಮಧ್ಯಮ ಹಾಗೂ ಬಡ ಜನರು ತೊಂದರೆಯನ್ನು ಅನುಭವಿಸುವಂತೆ ಮಾಡಿದೆ. ಸ್ವಚ್ಛ ಭಾರತ್ ಕಲ್ಪನೆಯ ಮೂಲಕ ಕಸವನ್ನು ಸ್ವಚ್ಛಗೊಳಿಸಬೇಕಿದ್ದ ಸರಕಾರವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ತೆಗೆದು ಹಾಕುತ್ತಿದೆ. ಜಾತ್ಯತೀತ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿದ್ದ ದೇಶದ ಗಣರಾಜ್ಯವನ್ನೇ ನಾಶ ಮಾಡಿದೆ ಎಂದರು.

ಸಿಪಿಐ(ಎಂ)ನ ಮುಖಂಡ ಯಾದವ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರವು ಆರ್‌ಬಿಐನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನೋಟುಗಳ ಮಾನ್ಯತೆಯನ್ನು ರದ್ದುಗೊಳಿಸಿದೆ. ಭಯೋತ್ಪಾದನೆ, ಕಾಳದಂಧೆ ಸೇರಿದಂತೆ ಹಲವು ದುಷ್ಪರಿಣಾಮಗಳನ್ನು ಮಟ್ಟ ಹಾಕುತ್ತೇವೆ ಎಂದು ನೋಟುಗಳನ್ನು ರದ್ದು ಮಾಡಿದೆ. ಆದರೆ ನಿಜವಾಗ್ಲೂ ಕಪ್ಪು ಹಣ ಸಿಕ್ಕಿದೆಯೇ..? ಬ್ಯಾಂಕ್‌ನಲ್ಲಿ ಜಮೆಯಾಗಿರುವ ಹಣದಲ್ಲಿ ಕಪ್ಪುಹಣ ಇರಲಿಲ್ಲವೇ..? ಎಂದು ಪ್ರಶ್ನಿಸಿದರು. ಈ ಸಂದರ್ಭ ಮುಖಂಡರಾದ ರಮಣಿ, ಸುಂದರ ಶೆಟ್ಟಿ, ರಾಧಾ, ಗಿರಿಜಾ, ಶಂಕರ ವಾಲ್ಪಾಡಿ, ಲಕ್ಷ್ಮೀ, ರಕ್ಷಾ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News