ಪಾನನಿಷೇಧವಿರುವ ಗುಜರಾತಿನಲ್ಲಿ ಮದ್ಯದ ಪಾರ್ಟಿಗೆ ದಾಳಿ
Update: 2017-02-11 15:55 IST
ಅಹ್ಮದಾಬಾದ್,ಫೆ.11: ಇಲ್ಲಿಯ ಖಾಸಗಿ ಅಪಾರ್ಟ್‌ಮೆಂಟ್‌ವೊಂದರ ಮೇಲೆ ಶನಿವಾರ ನಸುಕಿನಲ್ಲಿ ದಾಳಿ ನಡೆಸಿದ ಪೊಲೀಸರು ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್(ಎನ್‌ಐಡಿ)ನ 29 ವಿದಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 14 ವಿದ್ಯಾರ್ಥಿನಿಯರು ಮತ್ತು ಓರ್ವ ವಿದೇಶಿ ವಿದ್ಯಾರ್ಥಿ ಸೇರಿದ್ದಾರೆ. ಗುಜರಾತಿನಲ್ಲಿ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದೆ.
ಬಂಧಿತ ವಿದೇಶಿ ವಿದ್ಯಾರ್ಥಿ ಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಮೂಲದವನಾಗಿದ್ದಾನೆ ಎಂದು ಎಸಿಪಿ ಕಲ್ಪೇಶ್ ಚಾವ್ಡಾ ತಿಳಿಸಿದರು.
ಎನ್‌ಐಡಿ ಕ್ಯಾಂಪಸ್‌ಗೆ ಸಮೀಪದ ಪಲ್ಡಿ ಪ್ರದೇಶದಲ್ಲಿರುವ ಪುಷ್ಕರ್ ಅಪಾರ್ಟ್‌ಮೆಂಟ್ಸ್‌ನಲ್ಲಿ ಮದ್ಯದ ಪಾರ್ಟಿ ನಡೆಯುತ್ತಿದ್ದ ಬಗ್ಗೆ ತಡರಾತ್ರಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ದೂರು ಬಂದಿತ್ತು. ನಸುಕಿನ ಮೂರು ಗಂಟೆಯ ವೇಳೆಗೆ ದಾಳಿ ನಡೆಸಿದ ಪೊಲೀಸರು ಗುಂಡಿನ ಮತ್ತಿನಲ್ಲಿ ತೇಲುತ್ತಿದ್ದವರನ್ನು ಬಂಧಿಸಿ ಆರು ಮದ್ಯದ ಬಾಟ್ಲಿಗಳನ್ನು ವಶಪಡಿಸಿಕೊಂಡಿದ್ದಾರೆ.