×
Ad

ದುಬೈಯ ಮರುಭೂಮಿಯಲ್ಲಿ ಮಾದರಿ ಕೃಷಿಕ ಅಬ್ದುಲ್ ಶುಕೂರ್ !

Update: 2017-02-11 16:33 IST

ನಿನ್ನೆ ಶುಕ್ರವಾರ ಬಿಡುವಿದ್ದ ಕಾರಣ,ಸಹೊದ್ಯೋಗಿ ಸ್ನೇಹಿತ ಅಶ್ರಫ್ಕಾ ಅವರ ಸ್ನೇಹಿತನ ಮನೆಗೆ ಹೋಗಿ ಬರುವ ಅಂತ ತಿಳಿಸಿದ್ದರು.ಅಂತೆಯೇ ಜುಮಾ ಮುಗಿಸಿ ಊಟ ಆದ ಬಳಿಕ ನಾನು,ಅಶ್ರಫ್ ಹಾಗೂ ಅಬೂಬಕ್ಕರ್ ಕಾರಿನಲ್ಲಿ ಶಾರ್ಜದಿಂದ ದುಬೈ ಕಡೆ ಹೊರಟೆವು.ಸ್ವಲ್ಪದರಲ್ಲೇ ಕಾರು ಅಶ್ರಫ್ಕಾ ಅವರ ಸ್ನೇಹಿತನ ವಿಲ್ಲಾದ ಮುಂದೆ ನಿಂತಿತು.

“ಎಲೆತ್ತಿಲ್ ವಿಲ್ಲಾ” ಎಂದು ವಿಲ್ಲಾದ ಹೊರಗೆ ಬೋರ್ಡು ನೇತಾಡುತ್ತಿತ್ತು,ವಿಲ್ಲಾದ ಹೆಸರೇ ನನ್ನನು ಒಂಥರಾ ಆಕರ್ಷಿಸಿತು.ಆದರೆ ಹೆಸರಿನ ನಿಜವಾದ ಅರ್ಥ ವಿಲ್ಲಾದ ಒಳಗೆ ಕಾಲಿಟ್ಟಾಗಲೆ ಗೊತ್ತಾಗಿದ್ದು...ಒಂದು ಕ್ಷಣ ದುಬೈಯಲ್ಲಿ ಇರುವುದನ್ನೇ ಮರೆತುಬಿಟ್ಟೆ.ಹೌದು ವಿಲ್ಲಾದ ಒಳಗೆ ಸುಂದರವಾದ ತೋಟ...ಮರುಭೂಮಿಯಲ್ಲಿ ಇಂತಹ ಒಂದು ಅದ್ಭುತ ತೋಟವನ್ನು ನೋಡಿದರೆ ಯಾರಿಗೆ ತಾನೇ ಖುಷಿಯಾಗದೆ ಇರಲು ಸಾಧ್ಯ ಹೇಳಿ,

ಇವರ ಹೆಸರು ಅಬ್ದುಲ್ ಶುಕೂರ್,ಕ್ಯಾಲಿಕಟ್ ನ ಕೊಡುವಲ್ಲಿ ಸ್ವದೇಶಿ.ದುಬೈ ಯ ಖಾಸಗಿ ಕಂಪೆನಿಯಲ್ಲಿ ಉದ್ಯೋಗ..ಇವರ ಬಗ್ಗೆ ಬರೆಯಲು ಕಾರಣ,ನಾವು ಊರಿನಲ್ಲಿ ಹಲವಾರು ವ್ಯವಸ್ಥೆ (ಮಣ್ಣು,ಮಳೆ) ಹಾಗೂ ಪೂರಕವಾದ ವಾತಾವರಣವಿದ್ದರೂ ಈಗಿನ ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಇಂತಹ ತೋಟ,ಗಿಡಗಳನ್ನು ಬೆಳೆಸುವುದೇ ಮರೆತುಬಿಟ್ಟಿದ್ದೇವೆ.ನಮ್ಮ ಹಿರಿಯರು ಕೆಲವು ಬೆಳೆಗಳನ್ನು ಬೆಳೆಸುತ್ತಾ ಇದ್ದರೂ ಈಗ ಕಾಣಲು ಅಪರೂಪವಾಗಿದೆ.ಇಂಥಹ ಸನ್ನಿವೇಶದಲ್ಲಿ ದೂರದ ದುಬೈಯಲ್ಲಿ ಉದ್ಯೋಗಕ್ಕಾಗಿ ಬಂದ ಸಂಧರ್ಭದಲ್ಲಿ,ಬಿಡುವಿಲ್ಲದ ಸಮಯದಲ್ಲಿ,ಮಣ್ಣು ಮಳೆ ಇಲ್ಲದ ಮರುಭೂಮಿಯಲ್ಲಿ ಇಂಥಹ ಒಂದು ಸುಂದರವಾದ ತೋಟವನ್ನು ಸೃಷ್ಟಿ ಮಾಡಿರುವುದು ನಿಜಕ್ಕೂ ಅದ್ಭುತ.ಊರಿನಲ್ಲಿ ಬೇಕಾದಷ್ಟು ಫಲವತ್ತಾದ ಮಣ್ಣು ಇದ್ದರೂ ಕೃಷಿ ಮಾಡುವುದನ್ನು ಮರೆತ ನಾವು,ಈ ಮರುಭೂಮಿಯಲ್ಲಿ ಮಣ್ಣನ್ನು ಕ್ರಯಕ್ಕೆ ಖರೀದಿಸಿ ಇಂಥಹ ಸುಂದರವಾದ ತೋಟವನ್ನು ನಿರ್ಮಿಸಿರುವ ಅಬ್ದುಲ್ ಶುಕೂರ್ ಅವರನನ್ನು ಶ್ಲಾಘಿಸಲೇಬೇಕು.
ಸೋರೆಕಾಯಿ,ಬದನೇಕಾಯಿ,ಬೆಂಡೆಕಾಯಿ,ಕ್ಯಾಬೇಜ್,ಹೊಕೋಸು,ಕಾಯಿಮೆಣಸು,ಕುಂಬಳಕಾಯಿ,ಪಾಲಕ್ ಸೊಪ್ಪು,ಪುದಿನ ಸೊಪ್ಪು,ಕರಿಬೇವಿನ ಎಲೆ,ಟೊಮ್ಯಾಟೋ,ಪಪ್ಪಾಯ ಹೀಗೆ ಹಲವಾರು ಬಗೆಯ ತರಕಾರಿಗಳು,ಹಲವಾರು ಬಗೆಯ ಔಷಧಿ ಗಿಡಗಳು,ಹೂಗಿಡಗಳು ಹೀಗೆ ನೋಡುಗರ ಕಣ್ಣು ಸಾಲದು.

ಮೊಲ,ಕೋಳಿ,ಕಾಡುಕೋಳಿ,ನಾಡಕೋಳಿ,ಬಾತುಕೋಳಿಗಳ ಫಾರ್ಮ್ ಕೂಡ ನಿರ್ಮಿಸಿದ್ದಾರೆ.ಈ ಬಗ್ಗೆ ಮಲಯಾಳಂ ನ ಹಲವಾರು ಪ್ರತಿಷ್ಠಿತ ವಾಹಿನಿಯಲ್ಲಿ,ಪತ್ರಿಕೆಯಲ್ಲಿ ಕೂಡ ವರದಿ ಬಂದಿದೆ.ಹಲವಾರು ಪ್ರಶಸ್ತಿ ಕೂಡ ಶ್ರೀಯುತರಿಗೆ ಲಭಿಸಿದೆ.ಅಲ್ಲದೇ ಪ್ರತೀ ಶುಕ್ರವಾರ ಹಲವಾರು ಮಂದಿ ಈ ಸುಂದರ ತೋಟವನ್ನು ನೋಡಲು ಆಗಮಿಸುತ್ತಾರೆ.ಕಾಣಲು ಬಂದ ಅತಿಥಿಗಳಿಗೆ ಬಹಳ ಖುಷಿಯಿಂದ ಎಲ್ಲವನ್ನೂ ತೋರಿಸಿ,ಔಷಧಿ  ಗಿಡಗಳ ಉಪಯೋಗ ಗಳನ್ನು ಸವಿಸ್ತಾರವಾಗಿ ವಿವರಿಸಿಕೊಡುತ್ತಾರೆ.ದುಬೈ ಹತ್ತಿರದಲ್ಲಿರುವ ಸ್ನೇಹಿತರು ಬಿಡುವಿದ್ದರೆ ಶುಕ್ರವಾರದ ದಿವಸಗಳಲ್ಲಿ ಅಲ್ ನಹ್ದಾ ದಲ್ಲಿರುವ ಈ ಸುಂದರವ ತೋಟವನ್ನು ಒಮ್ಮೆ ಭೇಟಿ ಕೊಟ್ಟು ನೋಡಿ.ಶುಕೂರ್ ರವರ (0503867551)ಈ ದೂರವಾಣಿ ನಂಬರಿಗೆ ಕರೆ ಮಾಡಿ ವಿಚಾರಿಸಿದರೆ ಅವರು ವಾಟ್ಸ್ ಆಪ್ ನಲ್ಲಿ ಲೋಕೇಶನ್ ಕಳುಹಿಸಿಕೊಡುತ್ತಾರೆ.

Writer - ನಿಚ್ಚು ನಿಸಾರ್

contributor

Editor - ನಿಚ್ಚು ನಿಸಾರ್

contributor

Similar News