ಫಿಲಿಪ್ಪೀನ್ಸ್ ಪಟ್ಟಣದಲ್ಲಿ ಪ್ರಬಲ ಭೂಕಂಪ: 6 ಸಾವು
Update: 2017-02-11 20:49 IST
ಸುರಿಗಾವ್ ಸಿಟಿ (ಫಿಲಿಪ್ಪೀನ್ಸ್), ಫೆ. 11: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಶುಕ್ರವಾರ ರಾತ್ರಿ ಭೂಕಂಪ ಸಂಭವಿಸಿದ್ದು ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಕರ್ತರು ಶನಿವಾರ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಬದುಕುಳಿದವರ ಶೋಧದಲ್ಲಿ ತೊಡಗಿದ್ದಾರೆ.
ಮಿಂಡನಾವೊ ದ್ವೀಪದ ಸುರಿಗಾವ್ ಪಟ್ಟಣದಲ್ಲಿ ಶುಕ್ರವಾರ ತಡ ರಾತ್ರಿ ರಿಕ್ಟರ್ ಮಾಪಕದಲ್ಲಿ 6.5ರಷ್ಟಿದ್ದ ತೀವ್ರತೆಯ ಭೂಕಂಪ ಸಂಭವಿಸಿತು. ಸಾವಿರಾರು ಮಂದಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದು, ಪದೇ ಪದೇ ಸಂಭವಿಸಿದ ಪಶ್ಚಾತ್ ಕಂಪನಗಳಿಗೆ ಬೆದರಿದರು.