ಪಂಜಾಬ್ ತಂಡಕ್ಕೆ ಕನ್ನಡಿಗ ಅರುಣ್ ಕುಮಾರ್ ಬ್ಯಾಟಿಂಗ್ ಕೋಚ್
ಚಂಡಿಗಡ, ಫೆ.11: ಕರ್ನಾಟಕದ ಕೋಚ್ ಜೆ. ಅರುಣ್ ಕುಮಾರ್ 2017ರ ಐಪಿಎಲ್ ಋತುವಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಅರುಣ್ ಇದೇ ಮೊದಲ ಬಾರಿ ಐಪಿಎಲ್ ಫ್ರಾಂಚೈಸಿಗೆ ಕೋಚ್ ಆಗಿದ್ದಾರೆ.
‘‘ನಾನು ಒಂದು ತಿಂಗಳ ಹಿಂದೆಯೇ ಪಂಜಾಬ್ ಕ್ರಿಕೆಟ್ ತಂಡದ ಮುಖ್ಯಸ್ಥ ವೀರೇಂದ್ರ ಸೆಹ್ವಾಗ್‌ರೊಂದಿಗೆ ಚರ್ಚಿಸಿದ್ದೆ ಎಂದು ಅರುಣ್ ತಿಳಿಸಿದರು.
ಸೆಹ್ವಾಗ್‌ರಲ್ಲದೆ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರೊಂದಿಗೆ ಅರುಣ್ ಕಾರ್ಯನಿರ್ವಹಿಸಲಿದ್ದಾರೆ.
ಕರ್ನಾಟದ ಮಾಜಿ ಆಟಗಾರ ಅರುಣ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 7,208 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಕೋಚ್ ಆಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ತಂಡ 2013-14, 2014-15ರಲಿ ಸತತ ಎರಡು ವರ್ಷ ರಣಜಿ ಟ್ರೋಫಿ, ವಿಜಯ ಹಝಾರೆ ಟ್ರೋಫಿ ಹಾಗೂ ಇರಾನಿ ಕಪ್ ಸಹಿತ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲಲು ಮಾರ್ಗದರ್ಶನ ನೀಡಿದ್ದರು. ಕರ್ನಾಟಕ ಇತ್ತಿಚೆಗೆ ನಡೆದ ಅಂತರ್-ರಾಜ್ಯ ಟ್ವೆಂಟಿ-20 ಲೀಗ್‌ನಲ್ಲಿ ದಕ್ಷಿಣ ವಲಯದಲ್ಲಿ ಅಗ್ರ ಸ್ಥಾನ ಪಡೆಯಲು ಕಾರಣರಾಗಿದ್ದರು.