ಕಳೆದ ಮೂರು ತಿಂಗಳ ಪ್ರವಾಸಗಳ ವಿವರ ನೀಡುವಂತೆ ಸಚಿವರಿಗೆ ಪ್ರಧಾನಿ ಸೂಚನೆ

Update: 2017-02-12 15:08 GMT

ಹೊಸದಿಲ್ಲಿ,ಫೆ.12: ತನ್ನ ಸಂಪುಟ ಸಹೋದ್ಯೋಗಿಗಳು ಸರಕಾರದ ಉಪಕ್ರಮಗಳ...ವಿಶೇಷವಾಗಿ ನೋಟು ಅಮಾನ್ಯ ಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರೇ ಎನ್ನುವುದನ್ನು ತಿಳಿದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ,ಕಳೆದ ಮೂರು ತಿಂಗಳಲ್ಲಿ ಪ್ರವಾಸಗಳನ್ನೇನಾದರೂ ಕೈಗೊಂಡಿದ್ದರೆ ಸೋಮವಾರದೊಳಗೆ ಅವುಗಳ ವಿವರಗಳನ್ನು ಸಲ್ಲಿಸುವಂತೆ ಇತ್ತೀಚಿನ ಸಂಪುಟ ಸಭೆಯಲ್ಲಿ ಈ ಸಚಿವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಸಚಿವರು ಪ್ರವಾಸವನ್ನು ಕೈಗೊಂಡಿದ್ದಿರದ ಪಕ್ಷದಲ್ಲಿ ತಾವು ದಿಲ್ಲಿಯಲ್ಲಿಯೇ ಇದ್ದೆವು ಮತ್ತು ಕಚೇರಿ ಕರ್ತವ್ಯಕ್ಕೆ ಹಾಜರಾಗಿದ್ದೆವು ಎನ್ನುವುದನ್ನು ಉಲ್ಲೇಖಿಸಬೇಕಾಗಿದೆ ಎಂದು ಅವು ಹೇಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News