ತಮಿಳುನಾಡಿನಲ್ಲಿ ಇನ್ನೊಬ್ಬ ಎಐಎಡಿಎಂಕೆ ನಾಯಕನ ಹತ್ಯೆ
Update: 2017-02-12 22:49 IST
ಚೆನ್ನೈ,ಫೆ.1: ತಮಿಳುನಾಡಿನಲ್ಲಿ ಎಐಎಡಿಎಂಕೆಯ ಇನ್ನೊಬ್ಬ ಮುಖಂಡನನ್ನು ಇಂದು ಸಂಜೆ ಗುಂಪೊಂದು ಕೊಲೆಗೈದ ಘಟನೆ ವೆಲ್ಲೂರಿನಲ್ಲಿ ಸಂಜೆ ನಡೆದಿದೆ.
ಎಐಎಡಿಎಂಕೆ ಮುಖಂಡ ಜಿ.ಜಿ. ರವಿ ಎಂಬವರನ್ನು ಗುಂಪು ಕೊಲೆಗೈದು ಪರಾರಿಯಾಗಿದೆ. ತಮಿಳನಾಡಿನ ತಿರುವಣ್ಣಾಮಲೈನಲ್ಲಿ ಎಐಎಡಿಎಂಕೆ ಕಾರ್ಯದರ್ಶಿ ಕನಕ್ ರಾಜ್ ಎಂಬವವರನ್ನು ಇಂದು ಬೆಳಗ್ಗೆ ಹತ್ಯೆ ಮಾಡಲಾಗಿತ್ತು. ಇದೀಗ ಒಂದೇ ದಿನ ಇಬ್ಬರ ಕೊಲೆಯಾಗಿದೆ.