ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ಗೆ ಹ್ಯಾಕ್: ತಾತ್ಕಾಲಿಕ ಬ್ಲಾಕ್
Update: 2017-02-12 23:39 IST
ಹೊಸದಿಲ್ಲಿ,ಫೆ.12: ಕೇಂದ್ರ ಮತ್ತು ರಾಜ್ಯ ಸರಕಾರಗಳ ವೆಬ್‌ಸೈಟ್‌ಗಳ ಕುರಿತಂತೆ ಸೈಬರ್ ಭದ್ರತೆಯ ಕೊರತೆಯನ್ನು ವರದಿಯೊಂದು ಇತ್ತೀಚೆಗಷ್ಟೇ ಬೆಟ್ಟು ಮಾಡಿತ್ತು. ಇದನ್ನು ಪುಷ್ಟೀಕರಿಸುವಂತೆ ದೇಶದ ಆಂತರಿಕ ಭದ್ರತೆಯ ಹೊಣೆಯನ್ನು ಹೊತ್ತಿರುವ ಗೃಹ ಸಚಿವಾಲಯದ ವೆಬ್‌ಸೈಟ್‌ಗೇ ಹ್ಯಾಕರ್‌ಗಳು ಕನ್ನ ಹಾಕಿದ್ದಾರೆ.
ಗೃಹ ಸಚಿವಾಲಯದ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿರುವುದು ರವಿವಾರ ಬೆಳಗ್ಗೆ ಬೆಳಕಿಗೆ ಬಂದ ತಕ್ಷಣ ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿಗಳು ಅದನ್ನು ಸ್ಥಗಿತಗೊಳಿಸಿದ್ದಾರೆ. ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡಗಳು ಈ ಬಗ್ಗೆ ಪರಿಶೀಲಿಸುತ್ತಿವೆ.