×
Ad

ಗೆಲುವಿನ ಹಾದಿಯಲ್ಲಿ ಕೊಹ್ಲಿ ಪಡೆ

Update: 2017-02-12 23:43 IST

ಹೈದರಾಬಾದ್, ಫೆ.13: ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್‌ನಲ್ಲಿ ಪ್ರವಾಸಿ ಬಾಂಗ್ಲಾ ವಿರುದ್ಧ ಭಾರತ ಮೇಲುಗೈ ಸಾಧಿಸಿದ್ದು, ಗೆಲುವಿನ ಹಾದಿಯಲ್ಲಿದೆ.
 ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಇಂದು ಆಟ ನಿಂತಾಗ ಬಾಂಗ್ಲಾದೇಶ ಎರಡನೆ ಇನಿಂಗ್ಸ್‌ನಲ್ಲಿ 35 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 103 ರನ್ ಗಳಿಸಿದ್ದು, ಒತ್ತಡಕ್ಕೆ ಸಿಲುಕಿದೆ.
ಎರಡನೆ ಇನಿಂಗ್ಸ್‌ನಲ್ಲಿ 459 ರನ್‌ಗಳ ಗೆಲುವಿನ ಸವಾಲು ಪಡೆದಿರುವ ಬಾಂಗ್ಲಾದೇಶ ತಂಡ ಗೆಲ್ಲಬೇಕಾದರೆ ಇನ್ನೂ 356 ರನ್ ಗಳಿಸಬೇಕಾಗಿದೆ.
 388ಕ್ಕೆ ಆಲೌಟ್:ಮೂರನೆ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 104 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 322 ರನ್ ಮಾಡಿದ್ದ ಬಾಂಗ್ಲಾದೇಶ ತಂಡ ಈ ಮೊತ್ತಕ್ಕೆ 66 ರನ್ ಸೇರಿಸಿತು. ಅರ್ಧಶತಕ ದಾಖಲಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ಮೆಹೆದಿ ಹಸನ್ ಮಿರಾಝ್ (51) ಈ ಮೊತ್ತಕ್ಕೆ ಒಂದು ರನ್‌ನ್ನು ಸೇರಿಸದೆ ಇಂದಿನ ಮೊದಲ ಓವರ್‌ನ ನಾಲ್ಕನೆ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಭುವನೇಶ್ವರ ಕುಮಾರ್ ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು.
  ಮೆಹೆದಿ ಹಸನ್ ಮಿರಾಝ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ನಾಯಕ ಮುಶ್ಫಿಕುರ್ರಹೀಂ ಶತಕ ದಾಖಲಿಸಿ ಕೊನೆಯವರಾಗಿ ಔಟಾದರು. 9ನೆ ವಿಕೆಟ್‌ಗೆ ನಾಯಕ ಮುಶ್ಫಿಕುರ್ರಹೀಂ ಮತ್ತು ತಾಸ್ಕಿನ್ ಅಹ್ಮದ್ ಅವರು 11 ಓವರ್‌ಗಳ ಬ್ಯಾಟಿಂಗ್ ನಡೆಸಿ 39 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದರು.ರವೀಂದ್ರ ಜಡೇಜ ಅವರು ತಾಸ್ಕಿನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ತಾಸ್ಕಿನ್ ಅಹ್ಮದ್ ಅವರು 8 ರನ್(35ಎ,1ಬೌ) ಗಳಿಸಿದರು. ತೈಜುಲ್ ಇಸ್ಲಾಂ 10 ರನ್(38ಎ, 2ಬೌ) ಗಳಿಸಿದರು.
52ನೆ ಟೆಸ್ಟ್ ಆಡುತ್ತಿರುವ ಮುಶ್ಫಿಕುರ್ರಹೀಂ ಐದನೆ ಶತಕ ದಾಖಲಿಸಿದರು. ಅಂತಿಮವಾಗಿ 127.5ನೆ ಓವರ್‌ನಲ್ಲಿ 127 (262ಎ, 16ಬೌ, 2ಸಿ) ಗಳಿಸಿ ಔಟಾಗುವುದರೊಂದಿಗೆ ಬಾಂಗ್ಲಾ ಆಲೌಟಾಯಿತು. ಇವರ ವಿಕೆಟ್ ಉಡಾಯಿಸಿದ ಅಶ್ವಿನ್ ತಾನು ಗಳಿಸಿದ ವಿಕೆಟ್‌ಗಳ ಸಂಖ್ಯೆಯನ್ನು 250ಕ್ಕೆ ಏರಿಸಿದರು.
 ಭಾರತದ ಪರ ಉಮೇಶ್ ಯಾದವ್ 84ಕ್ಕೆ 3, ಆರ್.ಅಶ್ವಿನ್ 98ಕ್ಕೆ 2, ರವೀಂದ್ರ ಜಡೇಜ 70ಕ್ಕೆ 2 ವಿಕೆಟ್, ಭುವನೇಶ್ವರ ಕುಮಾರ್ ಮತ್ತು ಇಶಾಂತ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಭಾರತ 159/4 ಡಿಕ್ಲೇರ್: ಬಾಂಗ್ಲಾ ವಿರುದ್ಧ 299 ರನ್‌ಗಳ ಮೇಲುಗೈ ಸಾಧಿಸಿದ ಭಾರತ ಎರಡನೆ ಇನಿಂಗ್ಸ್ ಆರಂಭಿಸಿ 29 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
 
ಮೊದಲ ಇನಿಂಗ್ಸ್‌ನಲ್ಲಿ 83 ರನ್ ಗಳಿಸಿ ಶತಕ ವಂಚಿತರಾಗಿದ್ದ ಚೇತೇಶ್ವರ ಪೂಜಾರ್‌ಮತ್ತೊಮ್ಮೆ ಅರ್ಧಶತಕ ದಾಖಲಿಸಿದರು. 58 ಎಸೆತಗಳಲ್ಲಿ 54 ರನ್ ಸೇರಿಸಿ ಔಟಾಗದೆ ಉಳಿದರು. ನಾಯಕ ವಿರಾಟ್ ಕೊಹ್ಲಿ 40ಎಸೆತಗಳಲ್ಲಿ 38ರನ್ ಗಳಿಸಿದರು. ಮತ್ತು ಅಜಿಂಕ್ಯ ರಹಾನೆ 28 ರನ್ ಗಳಿಸಿ ಔಟಾದರು. ಭಾರತ ಆರಂಭಿಕ ದಾಂಡಿಗರನ್ನು ಬೇಗನೆ ಕಳೆದುಕೊಂಡಿತು. ಆರಂಭಿಕ ದಾಂಡಿಗ ಲೋಕೇಶ್ ರಾಹುಲ್(10) ಮತ್ತೊಮ್ಮೆ ವಿಫಲರಾದರು. ಮುರಳಿ ವಿಜಯ್ (7) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ತಾಸ್ಕಿನ್ ಅಹ್ಮದ್ ಇವರನ್ನು ಬೇಗನೆ ಪೆವಿಲಿಯನ್‌ಗೆ ಅಟ್ಟಿದರು.
 ಭಾರತ 29 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿದ್ದಾಗ ನಾಯಕ ಕೊಹ್ಲಿ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು.
 ಬಾಂಗ್ಲಾ 2ನೆ ಇನಿಂಗ್ಸ್ 103/3: ಎರಡನೆ ಇನಿಂಗ್ಸ್‌ನಲ್ಲಿ ಬಾಂಗ್ಲಾ 3 ವಿಕೆಟ್ ನಷ್ಟದಲ್ಲಿ 103 ರನ್ ಗಳಿಸಿದೆ. ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ ಅವರನ್ನು 5.2ಓವರ್‌ನಲ್ಲಿ ಅಶ್ವಿನ್ ಪೆವಲಿಯನ್ ಹಾದಿ ತೋರಿಸಿದರು. ಎರಡನೆ ವಿಕೆಟ್‌ಗೆ ಸೌಮ್ಯ ಸರ್ಕಾರ್ ಮತ್ತು ಮೊಮಿನುಲ್ ಹಕ್ 60 ರನ್ ಜಮೆ ಮಾಡಿದರು. ಸೌಮ್ಯ ಸರ್ಕಾರ್ 42 ರನ್ ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು.
 ಮೊಮಿನುಲ್ ಹಕ್ ಅವರು 27 ರನ್ ಗಳಿಸಿ ಔಟಾದರು . ಭಾರತದ ಅಶ್ವಿನ್ ಮತ್ತು ರವೀಂದ್ರ ಜಡೇಜ ತಲಾ 2 ವಿಕೆಟ್ ಪಡೆದರು.

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್: 687/6 ಡಿಕ್ಲೇರ್

ಬಾಂಗ್ಲಾದೇಶ ಪ್ರಥಮ ಇನಿಂಗ್ಸ್: 127.5 ಓವರ್‌ಗಳಲ್ಲಿ 388

ತಮೀಮ್ ಇಕ್ಬಾಲ್ ರನೌಟ್ 24

ಸೌಮ್ಯ ಸರ್ಕಾರ್ ಸಿ ಸಹಾ ಬಿ ಯಾದವ್ 15

ಮೊಮಿನುಲ್ ಹಕ್ ಎಲ್‌ಬಿಡಬ್ಲು ಯಾದವ್ 12

ಮಹಮ್ಮುದುಲ್ಲಾ ಎಲ್‌ಬಿಡಬ್ಲು ಇಶಾಂತ್ ಶರ್ಮ 28

ಶಾಕಿಬ್ ಅಲ್ ಹಸನ್ ಸಿ ಯಾದವ್ ಬಿ ಅಶ್ವಿನ್ 82

ಮುಶ್ಫಿಕುರ್ರಹೀಂ ಸಿ ಸಹಾ ಬಿ ಅಶ್ವಿನ್ 127

ಶಬ್ಬೀರ್ರಹ್ಮಾನ್ ಎಲ್‌ಬಿಡಬ್ಲು ಜಡೇಜ 16

ಮೆಹೆದಿ ಹಸನ್ ಬಿ ಕುಮಾರ್ 51

ತೈಜುಲ್ ಇಸ್ಲಾಂ ಸಿ ಸಹಾ ಬಿ ಯಾದವ್ 10

ತಸ್ಕಿನ್ ಅಹ್ಮದ್ ಸಿ ರಹಾನೆ ಬಿ ಜಡೇಜ 08

ಕಮ್ರುಲ್ ಇಸ್ಲಾಂ ಅಜೇಯ 00

ಇತರ 15

ವಿಕೆಟ್ ಪತನ: 1-38, 2-44, 3-64, 4-109, 5-216, 6-235, 7-322, 8-339, 9-378, 10-388.

ಬೌಲಿಂಗ್ ವಿವರ:

ಭುವನೇಶ್ವರ ಕುಮಾರ್ 21-7-52-1

ಇಶಾಂತ್ ಶರ್ಮ 20-5-69-1

ಆರ್.ಅಶ್ವಿನ್ 28.5-7-98-2

ಉಮೇಶ್ ಯಾದವ್ 25-6-84-3

ರವೀಂದ್ರ ಜಡೇಜ 33-8-70-2

ಭಾರತ ದ್ವಿತೀಯ ಇನಿಂಗ್ಸ್: 29 ಓವರ್‌ಗಳಲ್ಲಿ 159/4

ಮುರಳಿ ವಿಜಯ್ ಸಿ ರಹೀಂ ಬಿ ಅಹ್ಮದ್ 07

ರಾಹುಲ್ ಸಿ ರಹೀಂ ಬಿ ಅಹ್ಮದ್ 10

ಚೇತೇಶ್ವರ ಪೂಜಾರ ಅಜೇಯ 54

ವಿರಾಟ್ ಕೊಹ್ಲಿ ಸಿ ಮಹಮ್ಮುದುಲ್ಲಾ ಬಿ ಹಸನ್ 38

ಅಜಿಂಕ್ಯ ರಹಾನೆ ಬಿ ಹಸನ್ 28

ರವೀಂದ್ರ ಜಡೇಜ ಅಜೇಯ 16

ಇತರ 06

ವಿಕೆಟ್ ಪತನ: 1-12, 2-23, 3-90, 4-128.

ಬೌಲಿಂಗ್ ವಿವರ:

ತೈಜುಲ್ ಇಸ್ಲಾಮ್ 6-1-29-0

ತಸ್ಕಿನ್ ಅಹ್ಮದ್ 7-0-43-2

ಶಾಕಿಬ್ ಅಲ್ ಹಸನ್ 9-0-50-2

ಮೆಹೆದಿ ಹಸನ್ 7-0-32-0

ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್: 35 ಓವರ್‌ಗಳಲ್ಲಿ 103/3

ತಮೀಮ್ ಇಕ್ಬಾಲ್ ಸಿ ಕೊಹ್ಲಿ ಬಿ ಅಶ್ವಿನ್ 03

ಸರ್ಕಾರ್ ಸಿ ರಹಾನೆ ಬಿ ಜಡೇಜ 42

ಮೊಮಿನುಲ್ ಹಕ್ ಸಿ ರಹಾನೆ ಬಿ ಅಶ್ವಿನ್ 27

ಮಹಮ್ಮುದುಲ್ಲಾ ಅಜೇಯ 09

ಶಾಕಿಬ್ ಅಲ್ ಹಸನ್ ಅಜೇಯ 21

ಇತರ 01

ವಿಕೆಟ್ ಪತನ: 1-11, 2-71, 3-75.

ಬೌಲಿಂಗ್ ವಿವರ:

ಭುವನೇಶ್ವರ ಕುಮಾರ್ 5-2-14-0

ಆರ್.ಅಶ್ವಿನ್ 16-6-34-2

ಇಶಾಂತ್ ಶರ್ಮ 3-0-19-0

ಉಮೇಶ್ ಯಾದವ್ 3-0-9-0

ಜಡೇಜ 8-2-27-1.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News