×
Ad

ಪನ್ನೀರ್‌ಗೆ ಜೀವ ಬೆದರಿಕೆ: ಶಶಿಕಲಾ ನಿಷ್ಠ ಹಿರಿಯ ನಾಯಕನ ವಿರುದ್ಧ ಪ್ರಕರಣ

Update: 2017-02-13 17:25 IST

ಚೆನ್ನೈ,ಫೆ.13: ಇತ್ತೀಚಿಗೆ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರಿಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ನಿಷ್ಠರಾಗಿರುವ ಪಕ್ಷದ ದಕ್ಷಿಣ ಚೆನ್ನೈ(ಉತ್ತರ) ಜಿಲ್ಲಾ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ವಿ.ಪಿ.ಕಲೈರಾಜನ್ ವಿರುದ್ಧ ಸೋಮವಾರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಲೈರಾಜನ್, ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿರುವುದರ ಹಿಂದೆ ರಾಜಕೀಯ ಪ್ರತೀಕಾರ ಅಡಗಿದೆ ಎಂದು ಆರೋಪಿಸಿದರು.

ಪನ್ನೀರಸೆಲ್ವಂ ಅವರು ಶಶಿಕಲಾ ವಿರುದ್ಧ ಬಂಡೆದ್ದ ಬಳಿಕ ಅವರ ವಿರುದ್ಧ ಕಲೈರಾಜನ್ ಅವರು ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News