ತುರ್ಕ್‌ಮೆನಿಸ್ತಾನ: ಪುನರಾಯ್ಕೆಗೊಂಡ ಅಧ್ಯಕ್ಷ ಬರ್ಡಿಮುಖಮೆಡೆವ್

Update: 2017-02-13 14:56 GMT

ಅಶ್ಗಬಟ್ (ತುರ್ಕ್‌ಮೆನಿಸ್ತಾನ), ಫೆ. 13: ತುರ್ಕ್‌ಮೆನಿಸ್ತಾನದಲ್ಲಿ ರವಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಗುರ್ಬಂಗುಲಿ ಬರ್ಡಿಮುಖಮೆಡೆವ್ ಸುಮಾರು 98 ಶೇಕಡ ಮತಗಳೊಂದಿಗೆ ಏಳು ವರ್ಷಗಳ ಇನ್ನೊಂದು ಅವಧಿಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಾಜಧಾನಿ ಅಶ್ಗಬಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾ ಆಯೋಗದ ಅಧಿಕಾರಿಗಳು, 97 ಶೇಕಡಕ್ಕೂ ಅಧಿಕ ಮತದಾನವಾಗಿದೆ ಎಂದು ಹೇಳಿದರು.ಚುನಾವಣೆಯಲ್ಲಿ ಬರ್ಡಿಮುಖಮೆಡೆವ್ ಸೇರಿದಂತೆ ಒಂಬತ್ತು ಮಂದಿ ಕಣದಲ್ಲಿದ್ದರು.

ದಂತವೈದ್ಯ ಹಾಗೂ ಮಾಜಿ ಆರೋಗ್ಯ ಸಚಿವ 59 ವರ್ಷದ ಬರ್ಡಿಮುಖಮೆಡೆವ್, ತುರ್ಕ್‌ಮೆನಿಸ್ತಾನದ ಪ್ರಥಮ ಅಧ್ಯಕ್ಷ ಸಪರ್‌ಮುರಟ್ ನಿಯರೊವ್‌ರ ಸಾವಿನ ಬಳಿಕ 2006ರಲ್ಲಿ ಅಧಿಕಾರ ವಹಿಸಿಕೊಂಡರು.

ಕಳೆದ ವರ್ಷ ಅವರು, ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸುವ ನಿಯಮವನ್ನು ತೆಗೆದುಹಾಕುವ ಸಂವಿಧಾನ ತಿದ್ದುಪಡಿಯೊಂದಕ್ಕೆ ಸಹಿ ಹಾಕಿದ್ದರು. ಇನ್ನು ಮುಂದೆ ಜೀವನಪೂರ್ತಿ ಅಧ್ಯಕ್ಷರಾಗಿರುವ ಅವಕಾಶ ಅವರಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News