ಲಾಹೋರ್: ಪಂಜಾಬ್ ವಿಧಾನಸಭೆ ಹೊರಗೆ ಸ್ಫೋಟ; 7 ಸಾವು

Update: 2017-02-13 15:14 GMT

ಲಾಹೋರ್, ಫೆ. 13: ಪಾಕಿಸ್ತಾನದ ಪಂಜಾಬ್‌ನ ಲಾಹೋರ್‌ನಲ್ಲಿರುವ ವಿಧಾನಸಭಾ ಕಟ್ಟಡದ ದ್ವಾರದ ಹೊರಗೆ ಸೋಮವಾರ ಬಾಂಬೊಂದು ಸ್ಫೋಟಗೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ.

ಸ್ಫೋಟವು ಆತ್ಮಹತ್ಯಾ ದಾಳಿಯಾಗಿದೆ ಎಂದು ಪಂಜಾಬ್ ಕಾನೂನು ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದಾರೆ.ನಗರದ ಜನನಿಬಿಡ ಸ್ಥಳವಾಗಿರುವ ಮಾಲ್ ರಸ್ತೆಯಲ್ಲಿ ಸಂಜೆ ಸ್ಫೋಟ ನಡೆದಿದೆ.

ಈ ಸ್ಥಳದಲ್ಲಿ ಪ್ರತಿಭಟನೆಯೊಂದು ನಡೆಯುತ್ತಿದ್ದಾಗ ಸ್ಫೋಟಕಗಳಿಂದ ತುಂಬಿತ್ತು ಎಂದು ಭಾವಿಸಲಾದ ವಾಹನವೊಂದು ಸ್ಫೋಟಗೊಂಡಿತು.ಮೃತಪಟ್ಟವರಲ್ಲಿ ಹಲವು ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಳೆದ ವರ್ಷ ನಗರದ ಸಾರ್ವಜನಿಕ ಉದ್ಯಾನದಲ್ಲಿ ಬಾಂಬೊಂದು ಸ್ಫೋಟಿಸಿ ಸುಮಾರು 70 ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News