×
Ad

ತೆಹ್ಮಿನಾ ಜಾಂಜುವಾ ಪಾಕ್ ನ ಮೊದಲ ಮಹಿಳಾ ವಿದೇಶಾಂಗ ಕಾರ್ಯದರ್ಶಿ

Update: 2017-02-13 22:29 IST

ಇಸ್ಲಾಮಾಬಾದ್‌, ಫೆ.13: ಪಾಕಿಸ್ತಾನದ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ  ಅಂಬಾಸಡರ್‌ ಮತ್ತು ವಿಶ್ವಸಂಸ್ಥೆಯಲ್ಲಿ ಪಾಕ್‌ನ  ಖಾಯಂ ಪ್ರತಿನಿಧಿಯಾಗಿರುವ ತೆಹ್ಮಿನಾ ಜಾಂಜುವಾ ಅವರು  ನೇಮಕಗೊಂಡಿದ್ದಾರೆ.ತೆಹ್ಮಿನಾ ಜಾಂಜುವಾ ಪಾಕ್ ನ ಮೊದಲ ಮಹಿಳಾ  ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ.

ಇಝಾಝ್‌  ಅಹ್ಮದ್‌ ಚೌಧರಿ ಅವರ ಸ್ಥಾನಕ್ಕೆ ತೆಹ್ಮಿನಾ ನೇಮಕಗೊಂಡಿದ್ದಾರೆ. ಅಹ್ಮದ್‌ ಚೌಧರಿ ಅವರು ವಿಶ್ವಸಂಸ್ಥೆಯ ಹೊಸ ಅಂಬಾಸಡರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ತೆಹ್ಮಿನಾ ವಿದೇಶಾಂಗ ಸೇವಾ ಅಧಿಕಾರಿಯಾಗಿ 32 ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಇಟಲಿ ಅಂಬಾಸಡರ್‌ ಆಗಿ 2011ರಿಂದ 2015ರ ತನಕ ಸೇವೆ ಸಲ್ಲಿಸಿದ್ದರು. 2011ರಲ್ಲಿ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರೆ ಆಗಿ ಸೇವೆ ಸಲ್ಲಿಸಿದ್ದರು. ತೆಹ್ಮಿನಾ ಅವರು ಇಸ್ಲಾಮಾಬಾದ್‌ ಮತ್ತು ಕೊಲಂಬಿಯಾ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News