×
Ad

ರೆಸಾರ್ಟ್‌‌ನಲ್ಲಿ ಚಿನ್ನಮ್ಮ ಬೆಂಬಲಿಗ ಶಾಸಕರ ಕುಡಿದು ಕುಣಿದಾಟ... !

Update: 2017-02-13 23:55 IST

ಚೆನ್ನೈ, ಫೆ.13: ಕಾಂಚೀಪುರಂ ಜಿಲ್ಲೆಯ ಗೋಲ್ಡನ್ ಬೇ ರೆಸಾರ್ಟ್‌‌ನಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಬೆಂಬಲಿಗ ಶಾಸಕರು ಕುಡಿದು ಕುಣಿದಾಡಿದ ಘಟನೆ ವರದಿಯಾಗಿದೆ. 
ಕಾಂಚಿಪುರಂ ಕೂವತ್ತೂರಿನ ರೆಸಾರ್ಟ್‌‌ನಲ್ಲಿ  ಮೋಜು  ಮಸ್ತ್‌ನಲ್ಲಿ ತಲ್ಲೀನರಾಗಿರುವ ಶಾಸಕರನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಶಾಸಕರ ಜೊತೆ ರೆಸಾರ್ಟ್‌‌ನಲ್ಲಿ ಉಳಿದುಕೊಂಡಿದ್ದಾರೆ.
ರೌಡಿಗಳು,ಕಿಡಿಗೇಡಿಗಳು ರೆಸಾರ್ಟ್‌ ನಲ್ಲಿ ಜಮಾಯಿಸಿದ್ದಾರೆಂದು ತಿಳಿದು ಬಂದಿದೆ. ರೆಸಾರ್ಟ್‌ನ ಸುತ್ತ ಕಾಂಚಿಪುರಂ ಐಜಿಪಿ ಚಂದಾಮರೈ ಕಣ್ಣನ್‌ ನೇತೃತ್ವದಲ್ಲಿ ಮೂರು ಜಿಲ್ಲೆಗಳ ಐನೂರಕ್ಕು ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ವರು ಐಪಿಎಸ್ ಅಧಿಕಾರಿಗಳು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News