ಅಮೆರಿಕದ ನೆರವು ಕೋರಬೇಡಿ ಜಪಾನ್‌ಗೆ ಚೀನಾ ಎಚ್ಚರಿಕೆ
Update: 2017-02-14 21:52 IST
ಬೀಜಿಂಗ್, ಫೆ. 14: ಡಯವೋಯು ದ್ವೀಪಗಳ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಶಿಂರೊ ಅಬೆ ಹೇಳಿಕೆ ನೀಡುವುದನ್ನು ಚೀನಾ ಇಂದು ವಿರೋಧಿಸಿದೆ ಹಾಗೂ ದ್ವೀಪಗಳು ತನ್ನದೆಂದು ಹೇಳುವ 'ಅಕ್ರಮ ಕೋರಿಕೆ'ಗಳಿಗೆ ಅಮೆರಿಕದ ಬೆಂಬಲವನ್ನು ಕೋರುವುದರ ವಿರುದ್ಧ ಅದು ಜಪಾನ್‌ಗೆ ಎಚ್ಚರಿಕೆ ನೀಡಿದೆ.
''ಜಪಾನ್ ಮತ್ತು ಅಮೆರಿಕಗಳು ಇತ್ತೀಚೆಗೆ ನೀಡಿರುವ ಹೇಳಿಕೆಗಳ ಬಗ್ಗೆ ಚೀನಾ ಕಳವಳಗೊಂಡಿದೆ ಹಾಗೂ ಅದನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ಡಯವೋಯು ಡಾವೊ ಮತ್ತು ಅದಕ್ಕೆ ಸೇರಿದ ದ್ವೀಪಗಳು ಚೀನಾಕ್ಕೆ ಸಿಕ್ಕಿದ ಬಳುವಳಿಯಾಗಿದೆ'' ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ಬೀಜಿಂಗ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.