×
Ad

ದಂಪತಿ ಅಧಿಕಾರಿಗಳಿಗೆ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಣೆಗೆ ಸೇವಾ ನಿಯಮದಲ್ಲಿ ಮಾರ್ಪಾಟು

Update: 2017-02-14 23:40 IST

ಹೊಸದಿಲ್ಲಿ, ಫೆ.14: ಮದುವೆಯಾದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಒಂದೇ ರಾಜ್ಯದ ಪದವೃಂದದಲ್ಲಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಸೇವಾ ನಿಯಮದಲ್ಲಿ ಸರಕಾರ ಮಾರ್ಪಾಟು ಮಾಡಿದೆ.


ಪ್ರಸ್ತುತ ಇರುವ ಮಾರ್ಗದರ್ಶಿ ಸೂತ್ರದಲ್ಲಿ ಈ ರೀತಿಯ ವ್ಯವಸ್ಥೆ ಇರಲಿಲ್ಲ. 2011ರ ಐಎಎಸ್ ಅಧಿಕಾರಿ ಪಿ.ಪ್ರತಿಭನ್ ಅವರು ತಮ್ಮ ಬ್ಯಾಚ್‌ಮೇಟ್ ಹಾಗೂ ತಮಿಳುನಾಡು ಪದವೃಂದದ ಐಪಿಎಸ್ ಅಧಿಕಾರಿ , ದಿಲ್ಲಿ ಮೂಲದ ನಿಶಾರನ್ನು ವಿವಾಹವಾಗಿದ್ದರು. ತಮಿಳುನಾಡು ಮೂಲದ ಪಿ.ಪ್ರತಿಭನ್ ಅವರಿಗೆ ಕೇಂದ್ರಾಡಳಿತ ಪ್ರದೇಶದ ಪದವೃಂದ (ದಿಲ್ಲಿಯೂ ಸೇರಿದಂತೆ) ನಿಗದಿಗೊಳಿಸಲಾಗಿತ್ತು. ತಮಗಿಬ್ಬರಿಗೂ ಒಂದೇ ಕೇಡರ್‌ನಲ್ಲಿ ಕರ್ತವ್ಯ ನಿಗದಿಗೊಳಿಸಬೇಕೆಂದು ದಂಪತಿ ಕೋರಿಕೆ ಸಲ್ಲಿಸಿದ್ದರು. ಈ ಬಗ್ಗೆ ಚರ್ಚಿಸಿದ ಸಮಿತಿಯು, ಅಂತರ್-ಪದವೃಂದದ ವರ್ಗಾವಣೆಗೆ ಹಾಲಿ ಇರುವ ಮಾರ್ಗದರ್ಶಿ ಸೂತ್ರದಲ್ಲಿ ಬದಲಾವಣೆ ಅಗತ್ಯ ಎಂದು ತಿಳಿಸಿತ್ತು. ಇದರಂತೆ ಸಮಿತಿಯು ಪ್ರಸ್ತಾವಿಸಿದ ಮಾರ್ಗದರ್ಶಿ ಸೂತ್ರವನ್ನು ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿತ್ತು. ಇದರಂತೆ ದಂಪತಿಯ ಪೈಕಿ ಯಾರಾದರೂ ಒಬ್ಬರು ಅಧಿಕಾರಿ ತಮಗೆ ಹಂಚಿಕೆ ಮಾಡಿರುವ ಪದವೃಂದವನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸದಿದ್ದಲ್ಲಿ, ಅವರು ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಅರ್ಜಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಸಮೀಪದ ಪದವೃಂದಕ್ಕೆ ಅವರನ್ನು ಹಂಚಿಕೆ ಮಾಡಬಹುದು ಎಂಬ ಪ್ರಸ್ತಾವನೆಯನ್ನು ಸರಕಾರ ಒಪ್ಪಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News