×
Ad

ಬಿಜೆಪಿ ಇತರರ ಕೆಲಸದಿಂದ ಲಾಭವೆತ್ತಲು ಮಾತ್ರ ಕಲಿತಿದೆ, ಅದರಿಂದ ಕೆಲಸ ಆಗಿಲ್ಲ:ಶಿವಸೇನೆ

Update: 2017-02-15 20:28 IST

ಮುಂಬೈ,ಫೆ. 15: ಮುಂಬೈಯಲ್ಲಿ ಫೆಬ್ರವರಿ 16 ರಂದು ಬಿಎಂಸಿ ಚುನಾವಣೆ ನಡೆಯುತ್ತಿದೆ. ಮೊದಲಬಾರಿಗೆ ಬಿಜೆಪಿ ಮತ್ತು ಶಿವಸೇನೆ ಬೇರೆ ಬೇರೆಯಾಗಿ ಸ್ಪರ್ಧಿಸುತ್ತಿದೆ. ಇದಕ್ಕೆ ಸಂಬಂಧಿಸಿ ಶಿವಸೇನೆ ಪ್ರಮುಖ್ ಉದ್ಧವ್ ಠಾಕ್ರೆಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ತಕರಾರು ನಡೆಯುತ್ತಿದೆ. ಚುನಾವಣಾ ಪ್ರಚಾರದ ಜೊತೆಗೆ ರಾಜಕೀಯ ಪಕ್ಷಗಳ ನಾಯಕರುಪರಸ್ಪರ ಮಾತಿನ ಪ್ರಹಾರಕ್ಕಿಳಿದಿದ್ದಾರೆ.

ಇಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆಯ ಪುತ್ರ ಆದಿತ್ಯ ಠಾಕ್ರೆ ಫಡ್ನವೀಸ್ ಸರಕಾರದ ವಿರುದ್ಧ ದಾಳಿ ನಡೆಸಿದ್ದು, ಬಿಜೆಪಿ ಯಾವುದೇ ಕೆಲಸ ಮಾಡಿಲ್ಲ.ಇತರರ ಕೆಲಸದ ಲಾಭವೆತ್ತುವ ಕೆಲಸವನ್ನು ಮಾತ್ರ ಅದು ಮಾಡಿದೆ ಎಂದು ಹೇಳಿದ್ದಾರೆ.

ಶಿವಸೇನೆ ತನ್ನ ಕಾರ್ಯಾವಧಿಯಲ್ಲಿ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ನಡೆಸಿದೆ. ನಾವು ರಸ್ತೆಯನ್ನು ಉನ್ನತ ತಂತ್ರಜ್ಞಾನಗಳಿಂದ ಮಾಡಿದೆವು. ಆದರೆ ಅಭಿವೃದ್ಧಿಕೆಲಸದ ಕ್ರೆಡಿಟನ್ನು ಪಡೆಯಲು ಹವಣಿಸಿ ರಾಜ್ಯಸರಕಾರ ಬಹಳ ಸಣ್ಣ ಮಟ್ಟಕ್ಕಿಳಿದಿದೆ. ವಾಸ್ತವದಲ್ಲಿ ಇದು ಟ್ವಿಟರ್ ಸರಕಾರವಾಗಿದೆ. ನಮ್ಮ ಕೆಲಸವನ್ನು ತನ್ನ ಕೆಲಸವೆಂದು ಹೇಳುತ್ತಿದೆ.

ಕಾಂಗ್ರೆಸ್ ಆಳ್ವಿಕೆಯಲ್ಲಿ ನಿರ್ಮಾಣವಾದ ಮೆಟ್ರೊದ ಶ್ರೇಯವನ್ನು, ಮತ್ತು ನಾವು 2011ರಲ್ಲಿ ಒಂದು ಕೋಸ್ಟಲ್ ರೋಡ್ ಮಾಡುವ ಪ್ರಸ್ತಾವದ ಶ್ರೇಯವನ್ನು ಸ್ವಯಂ ಎತ್ತಿಕೊಳ್ಳುವ ಹವಣಿಕೆಗೆ ಬಿಜೆಪಿ ಸರಕಾರ ಇಳಿದಿದೆ ಎಂದು ಆದಿತ್ಯಠಾಕ್ರೆ ಟೀಕಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News