×
Ad

ಅಮೆರಿಕ ರಹಸ್ಯಸೇವೆ ನಿರ್ದೇಶಕ ಕ್ಲಾನ್ಸಿ ಪದತ್ಯಾಗ

Update: 2017-02-15 20:48 IST

ವಾಶಿಂಗ್ಟನ್, ಫೆ.15: ಅಮೆರಿಕದ ರಹಸ್ಯ ಸೇವೆ (ಸಿಕ್ರೇಟ್ ಸರ್ವಿಸ್)ಯ ನಿರ್ದೇಶಕ ಜೋಸೆಫ್ ಕ್ಲಾನ್ಸಿ ಮುಂದಿನ ತಿಂಗಳು ಪದತ್ಯಾಗ ಮಾಡಲು ನಿರ್ಧರಿಸಿದ್ದಾರೆಂದು ಮಂಗಳವಾರ ಇಲಾಖೆಯ ಪ್ರಕಟಣೆಯೊಂದು ತಿಳಿಸಿದೆ.

ಕ್ಲಾನ್ಸಿ ಅವರು ಎರಡು ವರ್ಷಗಳ ಹಿಂದೆ ರಹಸ್ಯ ಸೇವೆಯ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದರು. ಅವರ ಅಧಿಕಾರವಧಿಯಲ್ಲಿ ಅಮೆರಿಕದ ಅಧ್ಯಕ್ಷರ ರಕ್ಷಣೆಯ ಹೊಣೆಹೊತ್ತಿರುವ ಈ ಏಜೆನ್ಸಿಯಲ್ಲಿ ದೊಡ್ಡ ಮಟ್ಟದ ಭದ್ರತಾಲೋಪಗಳುಂಟಾಗಿರುವ ಬಗ್ಗೆ ಆರೋಪಗಳಿದ್ದವು.

ಕ್ಲಾನ್ಸಿ ಅವರು ಮಾರ್ಚ್ 4ರಂದು ಅಧಿಕಾರದಿಂದ ನಿರ್ಗಮಿಸಲಿದ್ದಾರೆಂದು ಏಜೆನ್ಸಿ ವಕ್ತಾರರು ತಿಳಿಸಿದ್ದಾರೆ. ಕ್ಲಾನ್ಸಿ ನಿರ್ಗಮನದೊಂದಿಗೆ ನೂತನ ಅಧ್ಯಕ್ಷ ಟ್ರಂಪ್ ಅವರಿಗೆ ತಾನು ಬಯಸಿದ ವ್ಯಕ್ತಿಯನ್ನು ಭದ್ರತಾ ಇಲಾಖೆಯ ಮುಖ್ಯಸ್ಥರನ್ನಾಗಿ ಮಾಡಲು ಸಾಧ್ಯವಾಗಲಿದೆ.

ಅಮೆರಿಕದ ರಹಸ್ಯ ಸೇವೆಯಲ್ಲಿ ಸುಮಾರು 7 ಸಾವಿರ ಮಂದಿ ಸಿಬ್ಬಂದಿಯಿದ್ದು, ಅಮೆರಿಕದ ಅಧ್ಯಕ್ಷರು ಹಾಗೂ ಅವರ ಕುಟುಂಬ ಸದಸ್ಯರನ್ನು ರಕ್ಷಿಸುವ ಹೊಣೆಯನ್ನು ಹೊಂದಿದೆ.

 ಟ್ರಂಪ್ ಅವರ ಪೂರ್ವಾಧಿಕಾರಿ ಬರಾಕ್ ಒಬಾಮಾ ಅವರು ಕ್ಲಾನ್ಸಿಯವರನ್ನು 2015ರ ಫೆಬ್ರವರಿಯಲ್ಲಿ ರಹಸ್ಯ ಸೇವೆಯ ಮುಖ್ಯಸ್ಥರನ್ನಾಗಿ ನೇಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News