×
Ad

ಭಾರತಕ್ಕೆ 27 ಅಮೆರಿಕನ್ ಸಂಸದರ ಭೇಟಿ

Update: 2017-02-15 21:07 IST

ವಾಶಿಂಗ್ಟನ್, ಫೆ.15: ಈ ತಿಂಗಳ ಅಂತ್ಯದ ವೇಳೆಗೆ ದಾಖಲೆ ಸಂಖ್ಯೆಯ 27 ಮಂದಿ ಅಮೆರಿಕ ಕಾಂಗ್ರೆಸ್ ಸಂಸದರು ಭಾರತಕ್ಕೆ ಭೇಟಿ ನೀಡಲಿದ್ದು, ಉಭಯ ದೇಶಗಳ ನಡುವೆ ವ್ಯೆಹಾತ್ಮಕವಾದ ದ್ವಿಪಕ್ಷೀಯ ಬಾಂಧವ್ಯಗಳು ತ್ವರಿತವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆಯೆಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ರಿಪಬ್ಲಿಕನ್ ಹಾಗೂ ಡೆಮಾಕ್ರಾಟಿಕ್ ಪಕ್ಷಗಳ ಹಿರಿಯ ಸಂಸದರು, ಎರಡು ಪ್ರತ್ಯೇಕ ನಿಯೋಗಗಳಾಗಿ ಭಾರತವನ್ನು ಸಂದರ್ಶಿಸಲಿದ್ದಾರೆ. ಈವರೆಗಿನ ಅತಿ ದೊಡ್ಡ ಸಂಖ್ಯೆಯ ಅಮೆರಿಕನ್ ಸಂಸದರ ಭಾರತ ಭೇಟಿ ಇದಾಗಿದೆಯೆಂದು, ಅಮೆರಿಕ ಸಂಸದೀಯ ದಾಖಲೆಗಳಿಂದ ತಿಳಿದುಬಂದಿದೆ.

ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ಅಮೆರಿಕನ್ ಸಂಸದರು ಕೇಂದ್ರ ಸರಕಾರದ ಉನ್ನತ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಚಿಂತನಚಿಲುಮೆ ಘಟಕಗಳ ಸದಸ್ಯರು ಹಾಗೂ ಎನ್‌ಜಿಓಗಳನ್ನು ಭೇಟಿಯಾಗಿ ಸಮಾ ಲೋಚಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಎರಡು ನಿಯೋಗಗಳಲ್ಲದೆ, ಅಮೆರಿಕ ಸಂಸತ್‌ನ ಪ್ರಭಾವಿ ನ್ಯಾಯಾಂಗ ಸಮಿತಿಯ ಅಧ್ಯಕ್ಷ ಬಾಬ್ ಗೊಡ್ಲಾಟ್ಟ್ ನೇತೃತ್ವದ ಎಂಟು ಮಂದಿ ಸಂಸದರ ದ್ವಿಪಕ್ಷೀಯ ನಿಯೋಗವೊಂದು ಫೆಬ್ರವರಿ 20ರಿಂದ 23ರವರೆಗೆ ಭಾರತಕ್ಕೆ ಆಗಮಿಸಲಿದ್ದು, ಹೊಸದಿಲ್ಲಿ ಹಾಗೂ ಬೆಂಗಳೂರಿಗೆ ಭೇಟಿ ನೀಡಲಿದೆ ಎಂದು ಅಮೆರಿಕ ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News