ಬಿಜೆಪಿ -ಶಿವಸೇನಾ ಆಮ್ನಾ-ಸಾಮ್ನಾ !

Update: 2017-02-16 10:11 GMT

ಪುಣೆ,ಫೆ.16 :ರಾಜ್ಯ ಬಿಜೆಪಿ ವಕ್ತಾರೆ ಶ್ವೇತಾ ಶಾಲಿನಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಶಿವಸೇನೆಯ ಮುಖವಾಣಿ ಸಾಮ್ನಾದ ಪ್ರಕಟಣೆಯನ್ನು ಮೂರು ದಿನ ನಿಷೇಧಿಸಬೇಕೆಂದುಆಗ್ರಹಿಸಿದ ಬೆನ್ನಲ್ಲೇ ಇದಕ್ಕೆ ಪುಣೆಯಲ್ಲಿ ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರತಿಕ್ರಿಯಿಸಿದ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಇದನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ.

ಶಾಲಿನಿ ತಮ್ಮ ಪತ್ರದಲ್ಲಿ ಪಕ್ಷ ಯಾ ಅಭ್ಯರ್ಥಿಗಳ ಪ್ರಚಾರ ಅಭಿಯಾನ ನಡೆಸುವುದು ಚುನಾವಣೆಯ ಎರಡು ದಿನ ಮುಂಚಿತವಾಗಿ ನಿಷೇಧಿಸಲಾಗುವುದರಿಂದ ಫೆಬ್ರವರಿ 16,20 ಹಾಗೂ 21ರಂದು ಸಾಮ್ನಾ ಪ್ರಕಟಣೆಯನ್ನು ನಿಷೇಧಿಸಬೇಕೆಂದು ಕೋರಿದ್ದರು. ಮಹಾರಾಷ್ಟ್ರದ 10 ಮುನಿಸಿಪಲ್ ಕಾರ್ಪೊರೇಶನ್ ಹಾಗೂ 25 ಜಿಲ್ಲಾ ಪರಿಷತ್ ಗಳಿಗೆ ಎರಡು ಹಂತಗಳಲ್ಲಿ ಫೆಬ್ರವರಿ 16 ಹಾಗೂ 21ರಂದು ಚುನಾವಣೆಗಳು ನಡೆಯಲಿವೆ.

‘‘ಸಾಮ್ನಾದ ಪ್ರಕಟಣೆ ನಿಲ್ಲಿಸುವುದು ಅಸಾಧ್ಯ’’ ಎಂದು ಹೇಳಿದ ಉದ್ಧವ್ ‘‘ಇಂದಿರಾ ಗಾಂಧಿಯನ್ನು ತುರ್ತು ಪರಿಸ್ಥಿತಿಗೆ ದೂಷಿಸಿದರೆ ಇದು ಕೂಡ ತುರ್ತುಪರಿಸ್ಥಿತಿಯಲ್ಲವೇ ?’’ ಎಂದು ಪ್ರಶ್ನಿಸಿದರು.

‘‘ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಚುನಾವಣೆ ನಡೆಯುವ ಸ್ಥಳಗಳಲ್ಲಿ ಪ್ರಚಾರವೇಕೆ ಕೈಗೊಳ್ಳುತ್ತಾರೆ ? ದಿನಾಂಕಗಳ ಬಗ್ಗೆ ಮರೆಯಿರಿ, ಚುನಾವಣಾ ನೀತಿ ಸಂಹಿತೆಯೆಂಬುದು ಇರುವಾಗ ಅವರಿಗೆ ಪ್ರಚಾರ ನಡೆಸಲು ಅನುಮತಿಸಬಾರದು,’’ಎಂದು ಹೇಳಿದರು.

‘‘ಎರಡು ವಿರೋಧಿ ಪಕ್ಷಗಳ ನಡುವಿನ ಹೊಂದಾಣಿಕೆ ಬಗ್ಗೆ ಸುದ್ದಿಗಳಿರುವಂತೆಯೇ ನಾನು ಕೂಡ ನನಗೆ ಮಹಾರಾಷ್ಟ್ರದ ಜನರೊಂದಿಗೆ ಹೊಂದಾಣಿಕೆ ಇದೆಯೆಂದು ಘೋಷಿಸುತ್ತೇನೆ,’’ಎಂದು ಉದ್ಧವ್ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News