ಮಂಗಳನಲ್ಲಿ ಇತ್ತೀಚಿನವರೆಗೂ ನೀರಿತ್ತು: ಸಂಶೋಧನೆ
Update: 2017-02-16 20:56 IST
ಲಂಡನ್, ಫೆ. 16: ಮಂಗಳ ಗ್ರಹದ ಮಧ್ಯರೇಖೆಯ ಸಮೀಪವಿರುವ ಪ್ರಾಚೀನ ಕಣಿವೆಯೊಂದರ ನೆಲದಲ್ಲಿ ಹೆಚ್ಚೇನೂ ಹಿಂದಿನದಲ್ಲದ ಕಾಲದಲ್ಲಿ ನೀರು ಹರಿದಿರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಇದು ಕೆಂಪು ಗ್ರಹದಲ್ಲಿ ಹಿಂದಿನ ಕಾಲದಲ್ಲಿ ಯಾವುದಾದರೂ ರೂಪದಲ್ಲಿ ಜೀವ ಇತ್ತೆ ಎಂಬುದನ್ನು ಪತ್ತೆಹಚ್ಚಲು ಉತ್ತೇಜನ ನೀಡಿದೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಸಂಶೋಧೆನೆಯು ‘ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್’ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
‘‘ಭೂಮಿಯಲ್ಲಿ, ಏರಿಳಿಯುವ ಅಂತರ್ಜಲವಿರುವ ಪ್ರದೇಶಗಳಲ್ಲಿರುವ ಮರುಭೂಮಿಯ ಮರಳ ದಿಣ್ಣೆಗಳಲ್ಲಿ ಆಗಾಗ ನೀರು ಹರಿಯುತ್ತದೆ ಹಾಗೂ ಇಲ್ಲಿಗೆ ಸಮೀಪದಲ್ಲಿ ಸರೋವರಗಳು, ನದಿಗಳು ಮತ್ತು ಕರಾವಳಿಗಳು ಕಂಡುಬರುತ್ತವೆ.
ಕಾಲ ಕಾಲಕ್ಕೆ ಸಂಭವಿಸುವ ಈ ಪ್ರವಾಹಗಳು ಆ ಪ್ರದೇಶಗಳಲ್ಲಿ ತಮ್ಮದೇ ಆದ ಪರಿಣಾಮಗಳನ್ನು ಬೀರುತ್ತವೆ’’ ಎಂದು ಸಂಶೋಧಕರಲ್ಲಿ ಒಬ್ಬರಾಗಿರುವ ಅಯರ್‌ಲ್ಯಾಂಡ್‌ನ ಡಬ್ಲಿನ್‌ನಲ್ಲಿರುವ ಟ್ರಿನಿಟಿ ಕಾಲೇಜ್‌ನ ಮೇರಿ ಬೂರ್ಕ್ ಹೇಳುತ್ತಾರೆ.