×
Ad

ಯಮನ್: ಅಂತ್ಯ ಸಂಸ್ಕಾರ ಮನೆಯ ಮೇಲೆ ಬಾಂಬ್; 10 ಸಾವು

Update: 2017-02-16 21:16 IST

ಸನಾ (ಯಮನ್), ಫೆ. 16: ಯಮನ್ ರಾಜಧಾನಿ ಸನಾದಲ್ಲಿ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಯುತ್ತಿದ್ದ ಮನೆಯೊಂದರ ಮೇಲೆ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ ನಡೆಸಿದ ವಾಯು ದಾಳಿಯಲ್ಲಿ ಒಂಬತ್ತು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಈ ಪ್ರದೇಶದಲ್ಲಿ ನಡೆದ ನಾಗರಿಕರ ಸಾವುನೋವುಗಳ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಮೈತ್ರಿಕೂಟ ಹೇಳಿದೆ.

ಸನಾದ ಉತ್ತರದಲ್ಲಿರುವ ಅಶಿರ ಎಂಬ ಗ್ರಾಮದ ಸ್ಥಳೀಯ ಬುಡಕಟ್ಟು ನಾಯಕರ ಮನೆಯ ಮೇಲೆ ವಾಯು ದಾಳಿ ನಡೆದಿದೆ. ಆ ಮನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಸ್ಥಳೀಯರು ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಅಲ್ಲಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News