×
Ad

ಶ್ರೇಷ್ಠತೆಯ ಮನೋಭಾವದಿಂದ ಅಮೆರಿಕ ಮಾತುಕತೆ ನಡೆಸುವುದು ಬೇಡ: ರಶ್ಯ

Update: 2017-02-16 22:03 IST

ಮಾಸ್ಕೊ (ರಶ್ಯ), ಫೆ. 16: ‘ಬಲಾಢ್ಯ ಸ್ಥಾನದಲ್ಲಿ ನಿಂತು’ ರಶ್ಯದೊಂದಿಗೆ ಮಾತುಕತೆ ನಡೆಸಲು ಯತ್ನಿಸುವುದು ಬೇಡ ಎಂದು ರಶ್ಯದ ರಕ್ಷಣಾ ಸಚಿವ ಸರ್ಗೀ ಶೊಯಿಗು ಗುರುವಾರ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಎರಡು ದೇಶಗಳ ಸೇನಾ ಮುಖ್ಯಸ್ಥರ ನಡುವೆ ನಡೆಯಲಿರುವ ಮೊದಲ ಮಾತುಕತೆಗೆ ಮುಂಚಿತವಾಗಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

‘‘ಪೆಂಟಗನ್‌ನೊಂದಿಗಿನ ಸಹಕಾರವನ್ನು ಮತ್ತೆ ಚಾಲ್ತಿಗೆ ತರಲು ನಾವು ಸಿದ್ಧ’’ ಎಂದು ಸಚಿವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.‘‘ಆದರೆ, ಶ್ರೇಷ್ಠತೆಯ ಮನೋಭಾವದೊಂದಿಗೆ ರಶ್ಯದೊಂದಿಗೆ ಮಾತುಕತೆ ನಡೆಸಲು ಅವರು ಮುಂದಾದರೆ ಅದಕ್ಕೆ ಭವಿಷ್ಯವಿಲ್ಲ’’ ಎಂದರು.

ರಶ್ಯದೊಂದಿಗಿನ ಯಾವುದೇ ಮಾತುಕತೆಯಲ್ಲಿ ಅಮೆರಿಕದ ರಾಜತಾಂತ್ರಿಕರು ಮೇಲುಗೈ ಸಾಧಿಸಬೇಕೆಂದುಅಮೆರಿಕ ಬಯಸುತ್ತದೆ ಎಂಬುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಬುಧವಾರ ನ್ಯಾಟೊಗೆ ಭರವಸೆ ನೀಡಿದ್ದರು.

ಈ ಹೇಳಿಕೆಗೆ ರಶ್ಯದ ರಕ್ಷಣಾ ಸಚಿವರು ಪ್ರತಿಕ್ರಿಯೆ ನೀಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News