ವಿಟ್ಲ ಮರಕ್ಕಿಣಿಯಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ

Update: 2017-02-17 09:23 GMT

ವಿಟ್ಲ, ಫೆ.17: ಇಲ್ಲಿಗೆ ಸಮೀಪದ ಕೇಪು ಗ್ರಾಮದ ಮರಕ್ಕಿಣಿ ಅರಣ್ಯದಲ್ಲಿ ಇಂದು ಮತ್ತೆ ಕಾಣಿಸಿಕೊಂಡಿದ್ದು, ಮಾಣಿಲ, ಪೆರುವಾಯಿ ಗ್ರಾಮ ಪ್ರದೇಶಕ್ಕೂ ವ್ಯಾಪಿಸಿದೆ.

ಬೆಲೆಬಾಳುವ ಮರಗಳು, ರಬ್ಬರ್ ತೋಟ ಬೆಂಕಿಗಾಹುತಿ ಆಗಿವೆ. ಬೆಂಕಿ ನಂದಿಸಲು ಗ್ರಾಮಸ್ಥರು ಶ್ರಮಿಸುತ್ತಿದ್ದು, ಬಂಟ್ವಾಳ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದೆ. 

ಮರಕ್ಕಿಣಿಯ ಕಾಡಿನಲ್ಲಿ ಗುರುವಾರವೂ ಬೆಂಕಿ ಕಾಣಿಸಿಕೊಂಡಿತ್ತು. ಇಂದು ಮತ್ತೆ ಅದೇ ಸ್ಥಳದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News