×
Ad

ಬಿಹಾರದ ಅಧಿಕಾರಿಗಳು ಜಗತ್ತಿನಲ್ಲೆಲ್ಲೂ ಮದ್ಯಪಾನ ಮಾಡುವಂತಿಲ್ಲ !

Update: 2017-02-17 15:12 IST

ಪಾಟ್ನಾ,ಫೆ.17: 10 ತಿಂಗಳ ಹಿಂದೆ ಪಾನನಿಷೇಧ ಜಾರಿಗೊಂಡಿರುವ ಬಿಹಾರದ ಸರಕಾರಿ ಅಧಿಕಾರಿಗಳು ರಾಜ್ಯದ ಹೊರಗೆ ಬಿಡಿ...ಜಗತ್ತಿನ ಯಾವ ಭಾಗಕ್ಕೆ ಹೋದರೂ ಮದ್ಯಪಾನ ಮಾಡುವಂತಿಲ್ಲ:ಇದು ಬಿಹಾರದ ನಿತೀಶ ಕುಮಾರ್ ನೇತೃತ್ವದ ಸರಕಾರವು ಹೊರಡಿಸಿರುವ ಫರ್ಮಾನು.

ಬಿಹಾರ ಸಂಪುಟವು ಕಳೆದ ವಾರ ರಾಜ್ಯ ಪಾನನಿಷೇಧ ಕಾನೂನಿಗೆ ತಿದ್ದುಪಡಿ ಯೊಂದನ್ನು ತರುವ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿದ್ದು, ಇನ್ನು ಮುಂದೆ ಅಧಿಕಾರಿಗಳು,ನ್ಯಾಯಾಧಿಕಾರಿಗಳು ಅಥವಾ ದಂಡಾಧಿಕಾರಿಗಳು ಎಲ್ಲಿಯಾದರೂ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ ದಂಡನೆಗೆ ಗುರಿಯಾಗುತ್ತಾರೆ. ಸೇವೆಯಿಂದ ವಜಾ,ಅಮಾನತು,ವೇತನ ಕಡಿತ ಶಿಕ್ಷೆಯನ್ನೂ ಅವರು ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಕರ್ತವ್ಯದಲ್ಲಿದ್ದಾಗ ಮದ್ಯಪಾನ ಮಾಡುವುದನ್ನು ಮಾತ್ರ ನಿಷೇಧಿಸಿದ್ದ ಸೇವಾ ನಿಯಮಗಳನ್ನು ತಿದ್ದುಪಡಿಗೊಳಿಸಲಾಗಿದೆ.

ಬಿಹಾರವು ಅಧಿಕಾರಿಗಳು ಮತ್ತು ನ್ಯಾಯಾಧೀಶರ ಮೇಲೆ ಇಂತಹ ನಿರ್ಬಂಧಗಳನ್ನು ಹೇರಿರುವ ದೇಶದ ಮೊದಲ ರಾಜ್ಯವಾಗಿದೆ. ರಾಜ್ಯದ ಹೊರಗೆ ಪ್ರತಿನಿಯೋಜನೆಯ ಮೇರೆಗೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೂ ಈ ನಿಯಮ ಅನ್ವಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News