ಕೇರಳದಲ್ಲಿ ಪೊಲೀಸರ ವಿರುದ್ಧ ನೀಡಿದ ದೂರುಗಳಲ್ಲಿ ಹೆಚ್ಚಳ: ಮಾನವಹಕ್ಕು ಆಯೋಗ
Update: 2017-02-17 18:26 IST
ತಿರುವನಂತಪುರಂ, ಫೆ. 17: ಕೇರಳದಲ್ಲಿ ಪೊಲೀಸರ ವಿರುದ್ಧ ಹೆಚ್ಚು ದೂರುಗಳು ಬರುತ್ತಿವೆ ಎಂದು ರಾಜ್ಯ ಮಾನವಹಕ್ಕು ಆಯೋಗದ ಕಾರ್ಯಾಧ್ಯಕ್ಷ ಪಿ. ಮೋಹನ್ ದಾಸ್ ಹೇಳಿದ್ದಾರೆ.
ಸಮಸ್ಯೆಗಳಿದ್ದಾಗ ಪ್ರಕರಣ ದಾಖಲಿಸುವುದು ಸಾಧಾರಣ ವಿಚಾರವಾಗಿದೆ. ಆದರೆ ಜನರಿಗೆ ಕಷ್ಟಕೊಡುವ ರೀತಿಯಲ್ಲಿ ಪೊಲೀಸರು ವರ್ತಿಸುತ್ತಿದ್ದಾರೆಂದು ಅನೇಕ ದೂರುಗಳು ಅಯೋಗದ ಮುಂದಿದೆ.
ಮಹಿಳೆಯರು ಕೂಡಾ ದೂರು ಹಿಡಿದು ಆಯೋಗವನ್ನು ಸಂಪರ್ಕಿಸುತ್ತಿರುವುದು ನನ್ನಲ್ಲಿ ಅಚ್ಚರಿಮೂಡಿಸಿದೆ ಎಂದು ಅವರು ವೆಬ್‌ಪೋರ್ಟಲೊಂದಕ್ಕೆ ತಿಳಿಸಿದ್ದಾರೆ.
ಪೊಲೀಸರಿಂದ ತಪ್ಪು ಸಂಭವಿಸಿದ್ದರೆ ಕಠಿಣ ಕ್ರಮಕೈಗೊಳ್ಳಬೇಕು. ಕೇವಲ ಎಚ್ಚರಿಕೆ ನೀಡುವುದು ಅಥವಾ ವರ್ಗಾವಣೆ ಮಾತ್ರ ಆಗಬಾರದು. ಬದಲಾಗಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಮೇಲಧಿಕಾರಿಗಳು ಈ ಕುರಿತು ಎಚ್ಚರಿಕೆ ವಹಿಸಬೇಕೆಂದು ಪಿ. ಮೋಹನ್ ದಾಸ್ ಹೇಳಿದ್ದಾರೆಂದು ವರದಿ ತಿಳಿಸಿದೆ.