ಈವರೆಗೆ ಯಾವ ವಿಮಾನದಲ್ಲೂ ಇಲ್ಲದ ಸೌಲಭ್ಯ ಇದೀಗ ಈ ವಿಮಾನದಲ್ಲಿ
ಬ್ರೆಜಿಲ್,ಫೆ.18 :ಬ್ರೆಜಿಲ್ ದೇಶದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಎಂಬ್ರೇಯರ್ ತನ್ನ ಅತ್ಯಂತ ದೊಡ್ಡ ಬಿಸಿನೆಸ್ ಕ್ಲಾಸ್ ಜೆಟ್ ಲೈನೇಜ್ 1000ಇ ಇದರ 10 ವರ್ಷಗಳ ಸೇವಾವಧಿ ಪೂರೈಕೆಯ ಸವಿನೆನಪಿಗಾಗಿ ಈ ವಿಮಾನವನ್ನು ಕ್ಯೊಟೊ ಏರ್ ಶಿಪ್ ಎಂಬ ಹೊಚ್ಚ ಹೊಸ ವಿನ್ಯಾಸದೊಂದಿಗೆ ಸಿದ್ಧ ಪಡಿಸಿದೆ. ಈ ವಿಮಾನದಲ್ಲಿರುವ ಸೌಲಭ್ಯಗಳು ಇಲ್ಲಿಯ ತನಕ ಬೇರೆ ಯಾವುದೇ ವಿಮಾನದಲ್ಲೂ ಇಲ್ಲವೆಂದು ಸಂಸ್ಥೆ ಹೇಳಿಕೊಂಡಿದೆ.
ಈ ಕ್ಯೊಟೊ ಏರ್ ಶಿಪ್ ನಲ್ಲಿ ದೊಡ್ಡ ಹಾಗೂ ಎತ್ತರದ ಕಿಟಿಕಿಗಳಿದ್ದು ಇವುಗಳ ಮೂಲಕ ಸೂರ್ಯನ ಬೆಳಕು ವಿಮಾನದೊಳಗೆ ಬೀಳಲಿದೆ. ಕಂಪೆನಿಯ 55 ಮಿಲಿಯನ್ ಡಾಲರ್ ಮೌಲ್ಯದ ಲೈನೇಜ್ 1000ಇ ವಿಮಾನವನ್ನು ಆರ್ಡರ್ ಮಾಡುವವರಿಗೆ ಈ ಸೌಲಭ್ಯವನ್ನು ಕಂಪೆನಿ ಒದಗಿಸಲಿದೆ.
ಖಾಸಗಿ ವಿಮಾನಗಳಲ್ಲಿ ಸೂರ್ಯನ ಬೆಳಕು ಒಳಗೆ ಬೀಳುವಂತಹ ಸೌಕರ್ಯವು ಹೊಸತೇನಲ್ಲ. 30 ವರ್ಷದಿಂದಲೂ ಸೆಸ್ಸ್ನಾಸ್ ವಿಮಾನಗಳಲ್ಲಿ ಈ ಸೌಲಭ್ಯವಿದೆ. ಆದರೆ ಇಷ್ಟು ದೊಡ್ಡ ಜೆಟ್ ನಲ್ಲಿ ಅದು ಕೂಡ 35,000 ಅಡಿ ಎತ್ತರದಲ್ಲಿ ಹಾರುವ ಇಂತಹ ವಿಮಾನದಲ್ಲಿ ಈ ಸೌಲಭ್ಯ ಇದೇ ಮೊದಲು.
ಈ ವಿಮಾನದ ಕಿಟಿಕಿಗಳು ನೆಲಕ್ಕೆ ತೀರಾ ಹತ್ತಿರದಲ್ಲಿದೆ. ಆದರೆ ಇದು ವಿಮಾನ ಅತ್ಯಂತ ಎತ್ತರದಲ್ಲಿ ಹಾರುವಾಗ ವಿಮಾನದೊಳಗೆ ಶಾಖ ಹೆಚ್ಚಿಸುವುದೇ ಎಂದು ತಿಳಿಯದಾಗಿದೆ.
ಸಂಸ್ಥೆ ಈ ಅತ್ಯಾಧುನಿಕ ಒಳಾಂಗಣ ವಿನ್ಯಾಸದ ವಿಮಾನದ ಪ್ರಥಮ ಗ್ರಾಹಕರಿಗಾಗಿ ಕಾಯುತ್ತಿದೆ.
courtesy : http://www.businessinsider.in