×
Ad

ಮೆಹಬೂಬ ಸಂಪುಟಕ್ಕೆ ಬುಖಾರಿ ರಾಜೀನಾಮೆ

Update: 2017-02-18 23:45 IST

ಜಮ್ಮು, ಫೆ.18: ಶನಿವಾರ ತನ್ನನ್ನು ಕಂದಾಯ, ಪರಿಹಾರ, ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಖಾತೆಯಿಂದ ತೋಟಗಾರಿಕೆ ಖಾತೆಗೆ ಎತ್ತಂಗಡಿಗೊಳಿಸಿದ ಬೆನ್ನಿಗೇ ಜಮ್ಮು-ಕಾಶ್ಮೀರದ ಮೆಹಬೂಬ ಮುಫ್ತಿ ನೇತೃತ್ವದ ಸರಕಾರದ ಸಚಿವ ಸೈಯದ್ ಬಷಾರತ್ ಬುಖಾರಿ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತಾನು ಮುಖ್ಯಮಂತ್ರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ತನ್ನ ಈ ನಡೆಗೆ ಎಲ್ಲ ಕಾರಣಗಳನ್ನು ವಿವರಿಸಿರುವುದಾಗಿ ಬುಖಾರಿ ಸುದ್ದಿಸಂಸ್ಥೆಗೆ ತಿಳಿಸಿದರು.

ಕ್ರೀಡಾ ಸಚಿವ ಇಮ್ರಾನ್ ರಝಾ ಅನ್ಸಾರಿ ಅವರೂ ರಾಜೀನಾಮೆ ಸಲ್ಲಿಸಿದ್ದಾರೆಂದು ಅನಧಿಕೃತ ವರದಿಗಳು ತಿಳಿಸಿವೆ. ಶಿಕ್ಷಣ ಸಚಿವರಾಗಿ ಸೈಯದ್ ಅಲ್ತಾಫ್ ಬುಖಾರಿಯವರ ಸೇರ್ಪಡೆಯ ಬಳಿಕ ಮೆಹಬೂಬ ಶನಿವಾರ ಸಣ್ಣ ಪ್ರಮಾಣದಲ್ಲಿ ಸಂಪುಟ ಪುನರ್‌ರಚನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News