ಅಮೇರಿಕ ಅಧ್ಯಕ್ಷರಲ್ಲಿ ಅಬ್ರಾಹಾಂ ಲಿಂಕನ್ ಗೆ ಪ್ರಥಮ ಸ್ಥಾನ

Update: 2017-02-19 07:19 GMT

ವಾಷಿಂಗ್ಟನ್,ಫೆ. 19: ಅಮೆರಿಕದ ಅಧ್ಯಕ್ಷರ ದಿನಕ್ಕೆ ಸಂಬಂಧಿಸಿ ನಡೆಸಲಾದ ಸಮೀಕ್ಷೆಯಲ್ಲಿ ಅಬ್ರಾಹಾಂ ಲಿಂಕನ್ ಅತ್ಯುತ್ತಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಾರ್ಜ್‌ವಾಷಿಂಗ್ಟನ್, ಪ್ರಾಂಕ್ಲಿನ್ ರೂಸ್‌ವೆಲ್ಟ್, ಥೀಯೋಡರ್ ರೂಸ್‌ವೆಲ್ಟ್, ಡೈವಟ್, ಐಸೋನೋವರ್ ಯಥಾಕ್ರಮವಾಗಿ ದ್ವಿತೀಯ ತೃತೀಯ, ನಾಲ್ಕನೇ ಹಾಗೂ ಐದನನೇ ಸ್ಥಾನವನ್ನು ಗಳಿಸಿದ್ದಾರೆ.

ಅಧ್ಯಕ್ಷರ ಬಗ್ಗೆ ಸಿ-ಸ್ಪಾನ್ ನಡೆಸಿದ ಮೂರನೆ ಸಮೀಕ್ಷೆ ಇದು. 91 ಅಧ್ಯಕ್ಷರಲ್ಲಿ ಬರಾಕ್ ಒಬಾಮಗೆ 12ನೆ ಸ್ಥಾನ ಲಭಿಸಿದೆ. ಇದೇ ಪ್ರಥಮ ಸಲ ಒಬಾಮ ಸಮೀಕ್ಷೆಯ ಭಾಗವಾಗಿದ್ದಾರೆ. ಒಂದನೆ, ಎರಡನೆ,ಮೂರನೆ ಸ್ಥಾನಕ್ಕೆ ಲಿಂಕನ್, ವಾಷಿಂಗ್ಟನ್ ,ಪ್ರಾಂಕ್ಲಿನ್ ರೂಸ್‌ವೆಲ್ಟ್ ಸರಿಯಾದ ವ್ಯಕ್ತಿಗಳು ಎಂದು ಸಮೀಕ್ಷೆಯ ಸಲಹಾ ಸಮಿತಿ ಸದಸ್ಯ ಸೈರ್ ವಿಶ್ವವಿದ್ಯಾನಿಲಯದ ಇತಿಹಾಸಕಾರ ಡಗ್ಲಾಸ್ ಬ್ರಿನ್‌ಕ್ಲಿ ಹೇಳಿದ್ದಾರೆ.

ಜಾರ್ಜ್ ಡಬ್ಲ್ಯು ಬುಷ್ 33ನೆ ಸ್ಥಾನದಲ್ಲಿದ್ದಾರೆ. ಅಮೆರಿಕದ ಪ್ರಥಮ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್‌ರ ಗೌರವಾರ್ಥ ಅಧ್ಯಕ್ಷರ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ ಮೂರನೆ ಸೋಮವಾರ ಅಮೆರಿಕ ಅಧ್ಯಕ್ಷರ ದಿನ ಆಚರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News