ಹಿಟ್ಲರ್ ಟೆಲಿಫೋನ್ ಹರಾಜಿಗೆ
Update: 2017-02-19 12:16 IST
ಮೆರಿಲೆಂಡ್, ಫೆ. 19: ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಬಳಸುತ್ತಿದ್ದ ಟ್ರಾವಲರ್ ಫೋನ್‌ನ್ನು ಹರಾಜಿಗಿರಿಸಲಾಗಿದೆ. ಮೆರಿಲೆಂಡ್ನ ಏಲಂ ಕಂಪೆನಿ ಫೋನ್ ಏಲಂಗೆ ಇರಿಸುತ್ತಿದೆ. ಒಂದು ಲಕ್ಷ ಡಾಲರ್ ಮೂಲ ಬೆಲೆಯನ್ನು ಫೋನ್‌ಗೆ ನಿಗದಿಗೊಳಿಸಲಾಗಿದೆ.
ರಷ್ಯನ್ ಸೇನಾಧಿಕಾರಿ ಬ್ರಿಗೇಡಿಯರ್ ರಾಲ್ಫ್ ರೆಯಿನರ್, ಹಿಟ್ಲರ್‌ನ ಬಂಕರ್ ಸಂದರ್ಶಿಸಿದ್ದ ವೇಳೆ ಈ ಫೋನ್ ಲಭಿಸಿತ್ತು. ಈಗ ರೆಯಿನರ್ ಪುತ್ರ ಈ ಫೋನ್ ಏಲಂ ಮಾಡಿಕೊಡುವಂತೆ ಕಂಪೆನಿಯನ್ನು ಸಂಪರ್ಕಿಸಿದ್ದಾರೆ. ಹಿಟ್ಲರ್ ಟೆಲಿಫೋನ್‌ಗೆ ಐತಿಹಾಸಿಕ ಮಹತ್ವವಿದೆ. ಹಲವಾರು ದಾಳಿಗೆ ಈ ಫೋನ್ ಮೂಲಕ ಹಿಟ್ಲರ್ ಆದೇಶ ನೀಡಿದ್ದನು. ಅವನ ಆದೇಶದಿಂದಾಗಿ ಲಕ್ಷಾಂತರ ಮಂದಿ ಜೀವಕಳಕೊಂಡಿದ್ದಾರೆ. ಟೆಲಿಫೋನ್‌ನನ್ನು ಫ್ಯಾಶಿಸ್ಟ್ ಪ್ರತೀಕವೆಂದು ಪರಿಗಣಿಸಿ ಏಲಂ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.